ದಿನದ ಸುದ್ದಿ
ನನ್ನ ಎದೆ ಬಗೆದರೆ ಸಿದ್ದರಾಮಯ್ಯನವರೇ ಕಾಣಿಸುತ್ತಾರೆ : ಸಚಿವ ಎಂಟಿಬಿ ನಾಗರಾಜ್
ಸುದ್ದಿದಿನ, ಬೆಂಗಳೂರು :ನಾನು ಸದಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಜಪಮಾಡುತ್ತಲೇ ಇರುತ್ತೇನೆ. ಹನುಮಂತನ ಎದೆಯನ್ನು ಬಗೆದರೆ ಹೇ ಶ್ರೀರಾಮ ಕಾಣಿಸುತ್ತಾನೋ ಹಾಗೆಯೇ ನನ್ನ ಎದೆ ಬಗೆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಣಿಸುತ್ತಾರೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಮೇಲಿರುವ ತಮ್ಮ ಒಲವನ್ನು ವ್ಯಕ್ತ ಪಡಿಸಿದ್ದಾರೆ.
ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪವಿರುವ ಜಟ್ಟಿಗರ ಹಳ್ಳಿಯಲ್ಲಿ ನೂತನವಾದ ಕನಕ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಾವೇಶದಿಂದ ಮಾತನಾಡಿದ ಅವರು, ಒಮ್ಮೆಯಾದರೂ ಸಚಿವನಾಗ ಬೇಕು ಎಂದಿದ್ದ ನನ್ನ ಕನಸನ್ನು ಸಿದ್ದರಾಮಯ್ಯ ನನಸು ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401