ರಾಜಕೀಯ

ಮಾಜಿ ಸಿಎಂ ಎನ್ನಲು ಮನಸ್ಸಿಲ್ಲ, ಸಿದ್ದು ಮತ್ತೆ ಸಿಎಂ ಆಗಲಿ : ಕಾಂಗ್ರೆಸ್ ನಾಯಕರ ಇಂಗಿತ

Published

on

ಸುದ್ದಿದಿನ,ಕೋಲಾರ : ಮತ್ತೆ ಸಿದ್ದರಾಮಯ್ಯ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ನ ಅರಣ್ಯ ಸಚಿವ ಶಂಕರ್ ಹಾಗೂ ಮಾಜಿ ವಿಧಾನಪರಿಷತ್ ಅಧ್ಯಕ್ಷ ವಿ.ಆರ್. ಸುದರ್ಶನ್ ಆಶಯವ್ಯಕ್ತ ಪಡಿಸಿದ್ದಾರೆ‌.

ಕೋಲಾರ ಜಿಲ್ಲೆ‌ ಮಾಲೂರು ಪಟ್ಟಣದ ಕಾಂಗ್ರೆಸ್ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಶಂಕರ್ ವೇದಿಕೆಯಲ್ಲಿ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಎನ್ನಲು‌ ಮನಸ್ಸಾಗುತ್ತಿಲ್ಲ ಎಂದು ಮಾತು ಆರಂಭಿಸಿ, ಮುಂದಿನ‌ ಮುಖ್ಯಮಂತ್ರಿಯಾಗುವವರು ಎಂದು ಬಾಷಣ ಆರಂಭಿಸಿದರು. ಸಿದ್ದರಾಮಯ್ಯ ರಾಜ್ಯದಲ್ಲಿ ನೀಡಿರುವ ಉತ್ತಮ ಆಡಳಿತ ನೋಡಿ ಅವರನ್ನು ಮಾಜಿ ಎನ್ನುಲು ಆಗುತ್ತಿಲ್ಲ, ಅವರ ಆಡಳಿತ ಮತ್ತೆ ರಾಜ್ಯಕ್ಕೆ ಬೇಕು ಎಂಬ ವಿ.ಆರ್‌. ಸುದರ್ಶನ್ ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮತ್ತೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವ ಇಂಗಿತ ವ್ಯಕ್ತಪಡಿಸಿದ ಸಚಿವರು ಹಾಗೂ ಸಿದ್ದು ಬೆಂಬಲಿಗರು.

ಸಿದ್ದು ಜೊತೆ ಸೆಲ್ಫಿ

ಮಾಜಿ ಸಿಎಂ ಸಿದ್ದು ಜೊತೆ ಸೆಲ್ಪಿ ತೆಗೆದುಕೊಂಡು ಕಾಲಿಗೆ ನಮಸ್ಕಾರ ಮಾಡಿಕೊಂಡ ಮಹಿಳೆಯರು. ಸಿದ್ದು ಮಾಜಿಯಾದ್ರು ಖದರ್ ಏನು ಕಮ್ಮಿ ಆಗಿಲ್ಲ ನೋಡಿ. ಇದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರದಲ್ಲಿ ನಡೆದ ಘಟನೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version