ದಿನದ ಸುದ್ದಿ
ದಾವಣಗೆರೆ | ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರಕ್ಕೆ ಎನ್.ಎಸ್.ಯು.ಐ ಮನವಿ
ಸುದ್ದಿದಿನ,ದಾವಣಗೆರೆ : ರಾಜ್ಯ ಸರ್ಕಾರವು ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿರುವುದು ಕಂಡನೀಯ ರಾಷ್ಟ್ರಾದ್ಯಾಂತ, ರಾಜ್ಯಾದಂತ ಕೊರೊನಾ ಸೊಂಕು (ಕೋವಿಡ್-19) 2020ನೇ ಸಾಲಿನಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವುದು ತುಂಬಾ ಅಘಾತಕಾರಿಯಾದ ಸಂಗತಿಯಾಗಿದೆ.
ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಸೋಂಕು ಏನಾದರೂ ವಿದ್ಯಾರ್ಥಿಗಳಿಗೆ ಹರಡಿದರೆ ಆಗುವ ಅನಾವುತಕ್ಕೆ ಸರ್ಕಾರವೇ
ಜವಾಬ್ದಾರಿಯಾಗುತ್ತದೆ. ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆ ಬರೆಯುವ ಸನ್ನಿವೇಶ ಎದುರಾಗಿದೆ ಹಾಗೂ ಮತ್ತೊಂದು ಪ್ರಮುಖವಾದ ವಿಷಯವೇನೆಂದರೆ, ಪರೀಕ್ಷೆ ಬರೆಯಲು ಕೆಲ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಕಂಟೈನೈಂಟ್ ವಲಯದಿಂದ ಬಂದು ಬರೆಯುವರು ಸಹ ಇರುತ್ತಾರೆ.
ಇಂತಹ ಸಂದರ್ಭದಲ್ಲಿ ಸೋಂಕು ಹರಡುವ ಸಂಭವ ಅತಿ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಎಷ್ಟು ಮುಖ್ಯವೋ, ವಿದ್ಯಾರ್ಥಿಗಳ ಜೀವನವೂ ಅಷ್ಟೇ ಮುಖ್ಯ ಹಾಗೂ ಎಲ್ಲಾ ಕಾಲೇಜ್‌ಗಳ ಆನ್‌ಲೈನ್ ತರಗತಿಗಳಿಗೆ ಮೊರೆ ಹೋಗಿದ್ದಾರೆ ಆರು ತಿಂಗಳಾದರೂ ಪಠ್ಯ ಪೂರ್ಣಗೊಳಿಸಲು ಹರ ಸಾಹಸ ಪಡುವ ಶಿಕ್ಷಕರು ಕೇವಲ ಎರಡು ತಿಂಗಳಲ್ಲಿ ಆನ್‌ಲೈನ್ ಪಠ್ಯದಲ್ಲಿ ಪೂರ್ಣಗೊಳಿಸಿದ್ದೇವೆಂದು ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಇದರಿಂದ ಆಗುತ್ತಿರುವ ವಿದ್ಯಾರ್ಥಿಗಳಿಗೆ ಕಷ್ಟ ಹೇಳಿಕೊಳ್ಳದೆ ದಿಕ್ಕು ತೋಚದಂತಾಗಿದೆ.ಹಾಗಾಗಿ
ಪಾಠವು ಅರ್ಥವಾಗದೆ ಸೋಂಕಿನ ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ.ರಾಜ್ಯ ಸರ್ಕಾರವು ಈ ವಿಷಯವನ್ನು ಮನಗಂಡು ಪರೀಕ್ಷೆ ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗು ರಾಜ್ಯ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಮುಷಾಯಿದ್ ಫಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಪಾಟೀಲ್, ಚಂದನ ಆರಾಧ್ಯ,ಅಮಿತ್,ವೀರೇಶ್, ಸಚಿನ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243