ದಿನದ ಸುದ್ದಿ
ಕೃಷಿ ಪ್ರಶಸ್ತಿಗಾಗಿ ರೈತರಿಂದ ಅರ್ಜಿ ಆಹ್ವಾನ
ಸುದ್ದಿದಿನ,ಕಲಬುರಗಿ: ಕೃಷಿ ಪ್ರಶಸ್ತಿ ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಪ್ರಶಸ್ತಿಗಾಗಿ ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯ ಮಟ್ಟಕ್ಕೆ ಮುಂಗಾರು ಭತ್ತ (ನೀರಾವರಿ) ಬೆಳೆ ಹಾಗೂ ಮುಂಗಾರು ರಾಗಿ, ಹಿಂಗಾರು ಜೋಳ, ಮುಂಗಾರು ಶೇಂಗಾ, ಮುಂಗಾರು ತೊಗರಿ, ಹಿಂಗಾರು ಕಡಲೆ, ಮುಂಗಾರು ಸೊಯಾ ಅವರೆ, ಮುಂಗಾರು ಮುಸುಕಿನ ಜೋಳ, ಮುಂಗಾರು ನವಣೆ, ಮುಂಗಾರು ಸಜ್ಜೆ (ಮಳೆಯಾಶ್ರಿತ) ಬೆಳೆÀಗಳನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಮಟ್ಟಕ್ಕೆ ಮುಂಗಾರು ತೊಗರಿ (ಮಳೆಯಾಶ್ರೀತ) ಬೆಳೆ ಮತ್ತು ತಾಲೂಕು ಮಟ್ಟಕ್ಕೆ ಚಿಂಚೋಳಿ, ಚಿತ್ತಾಪೂರ ಮತ್ತು ಸೇಡಂ ತಾಲೂಕುಗಳಿಗೆ ಮುಂಗಾರು ತೊಗರಿ (ಮಳೆಯಾಶ್ರಿತ) ಬೆಳೆ ಹಾಗೂ ಅಫಜಲಪೂರ, ಆಳಂದ, ಕಲಬುರಗಿ ಮತ್ತು ಜೇವರ್ಗಿ ತಾಲೂಕುಗಳಿಗೆ ಹಿಂಗಾರು ಜೋಳ (ಮಳೆಯಾಶ್ರಿತ) ಬೆಳೆಗಳನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 25 ರೂ.ಹಾಗೂ ಸಾಮಾನ್ಯ ರೈತರಿಗೆ ರೂ. 100 ರೂ. ಪ್ರವೇಶ ಶುಲ್ಕವಿದೆ. ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ನೀಡಲಾಗುತ್ತದೆ. ಬೆಳೆ ಸ್ಪರ್ಧೆಯ ಪ್ರಶಸ್ತಿಗಾಗಿ ರೈತರು ಅರ್ಜಿ ಸಲ್ಲಿಸಲು 2020ರ ಸೆಪ್ಟೆಂಬರ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243