ದಿನದ ಸುದ್ದಿ

ಫ್ಯಾಷನ್ ಪ್ರಿಯರಿಗಿದು ಸಿಹಿ ಸುದ್ದಿ..!

Published

on

ಸುದ್ದಿದಿನ,ಬೆಂಗಳೂರು : ದೇಶದ ಫ್ಯಾಷನ್ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಫ್ಯಾಷನ್ ಪ್ರಿಯರಿಗೊಂದು ಶುಭ ಸುದ್ದಿ. ತ್ವಶಿ ಸಮೂಹದ ನೂತನ ಎಕ್ಲೂಸಿವ್ ಮಳಿಗೆ ನಗರದಲ್ಲಿ ನಿನ್ನೆ ಭಾನುವಾರ ಉದ್ಘಾಟನೆಗೊಂಡಿತು.

ಕನ್ನಡ ಸಿನಿಮಾ ನಟಿ ಸುಧಾ ಬೆಳವಾಡಿ ಮತ್ತು 2016 ನೇ ಸಾಲಿನ ಮಿಸೆಸ್ ಕರ್ನಾಟಕ ಶ್ರೀಮತಿ ಶುಭಾ ಶ್ರೀರಾಮ್ ಈ ಸಂದರ್ಭದಲ್ಲಿ ಹಾಜರಿದ್ದರು. ಬೆಂಗಳೂರಿನಲ್ಲಿ ಕಾರ್ಯಾರಂಭಿಸುವುದರೊಂದಿಗೆ, ತಶ್ವಿ ಬಳಗವು ಭಾರತದ ಪ್ರಮುಖ ನಗರದಲ್ಲಿ ತನ್ನ ಛಾಪನ್ನು ಒತ್ತುತ್ತಿದೆ.ಜನಪ್ರಿಯ ಶಾಪಿಂಗ್ ತಾಣವಾಗಿರುವ 196, ಮೊದಲನೇ ಮಹಡಿ, ನ್ಯೂ ಬಿ ಎಲ್ ರೋಡ್, ಆರ್‍ಎಂವಿ 2 ನೇ
ಹಂತದಲ್ಲಿದೆ.

ಈ ಮಳಿಗೆಯಲ್ಲಿ ತಶ್ವಿಯ ವಿಶೇಷ ವಿನ್ಯಾಸಗಳು ಮಧ್ಯಮ ದರದಿಂದ ಆರಂಭಗೊಂಡು ವಿವಿಧ ದರದಲ್ಲಿ ಲಭ್ಯವಿದೆ. ಭಾರತೀಯತೆಯೊಂದಿಗೆ ಪಾಶ್ಚಿಮಾತ್ಯತೆಯ ಸೊಬಗು ಹೊಂದಿರುವ ವಿನ್ಯಾಸಗಳು ಇಲ್ಲಿಯ ಪ್ರಮುಖ ಆಕರ್ಷಣೆ. ತ್ವಿಶಿಯ ವಿನ್ಯಾಸಗಳು ಪ್ರತಿಯೊಬ್ಬರಿಗೂ ವಿಶೇಷ ಹಾಗು ಶ್ರೀಮಂತಿಕೆಯ ಮೆರಗು ತಂದುಕೊಡುತ್ತವೆ. ಇಲ್ಲಿ ಇಂದಿನ ಯುವ ಪೀಳಿಗೆಯ ಅಭಿರುಚಿಗೆ ತಕ್ಕುದಾದ ಆಯ್ಕೆ ಇರುವುದಲ್ಲದೆ, ಇತರ ವಯೋಮಾನದವರ
ಮನೋಭಿಲಾಷೆಗೂ ಹೊಂದುವಂತಹ ವಿನ್ಯಾಸಗಳೂ ಲಭ್ಯವಿದೆ. ಈ ಹೊಸ ಮಳಿಗೆ ವಿಶಾಲವಾಗಿದೆ.

ಆಯ್ದ, ಕೈಯಿಂದ ಮಾಡಲಾದ ಕೆಲವು ವಿನ್ಯಾಸಗಳಿಗೆ ವಿಶೇಷ ರಿಯಾಯಿತಿ ಲಭ್ಯವಿದ್ದು, ಇದು ನಿಜವಾಗಿಯೂ ಶಾಪಿಂಗ್ ಪ್ರಿಯರ ಸ್ವರ್ಗ ಎನಿಸುವುದರಲ್ಲಿ ಸಂದೇಹವಿಲ್ಲ. ಈ ಮಳಿಗೆಯಲ್ಲಿ ಸಾಂಪ್ರದಾಯಿಕ, ಭಾರತೀಯ ಮತ್ತು ಪಾಶ್ಚಾತ್ಯ ಶೈಲಿ ಸೇರಿದಂತೆ ವಿಭಿನ್ನ ವಿನ್ಯಾಸದ ಸೀರೆಗಳ ಸಂಗ್ರಹವಿದೆ. ಅಲ್ಲದೆ, ಸಾಂಪ್ರದಾಯಿಕ, ಕ್ಯಾಶುವಲ್, ಪಾರ್ಟಿ, ಹಬ್ಬಗಳಿಗೆ ಮತ್ತು ವಿವಾಹ ಸಂದರ್ಭಗಳಿಗೆ ಸರಿಹೊಂದುವ ದಿರಿಸುಗಳ ಸಂಗ್ರಹವಿದೆ.

ಬೆಂಗಳೂರಿನಲ್ಲಿ ನಮ್ಮ ಸಮೂಹದ ಮೊದಲನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಆರಂಭಿಸಿರುವುದು ನಮಗೆ ಅತ್ಯಂತ ಸಂತೋಷಕರ ವಿಷಯವಾಗಿದೆ. ಇದು ನಮ್ಮ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆ ಆಗುವುದರಲ್ಲಿ ಸಂಶಯವಿಲ್ಲ. ಬೆಂಗಳೂರಿನ ಫ್ಯಾಶನ್ ಪ್ರಿಯರಿಗೆ ಆಹ್ಲಾದಕಾರ ವಾತಾವರಣದಲ್ಲಿ ತ್ವಿಶಿಯ ವಿವಿಧ ಬ್ರಾಂಡ್‍ಗಳನ್ನು ಪರಿಚಯಿಸುತ್ತದೆ. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ಶೈಲಿಯಲ್ಲಿ ಸಮಕಾಲೀನ ವಿನ್ಯಾಸಗಳು, ಪಾಶ್ಚಿಮಾತ್ಯಮತ್ತು ವಿವಿಧ ಜೀವನಶೈಲಿಗೆ ಸಂಬಂಧಿಸಿದ ವಿವಿಧ ಆಯ್ಕೆಗಳು ಇಲ್ಲಿ ಲಭ್ಯವಿದೆ”ಎನ್ನುತ್ತಾರೆ ತ್ವಿಶಿ ಮಳಿಗೆಯ ಸಹ ಸಂಸ್ಥಾಪಕಿ ಮತ್ತು ಪಾಲುಗಾರರೂ ಆಗಿರುವ ಶಲೀನ್ ಸುಬ್ಬಯ್ಯ.

“ನಾವು ಈ ಮಳಿಗೆಯನ್ನು ಆರಂಭಿಸಲು ಉತ್ಸುಕರಾಗಿದ್ದೇವೆ. ಇಂದು ಎಲ್ಲೆಡೆಯೂ ಸ್ಪರ್ಧೆ
ಇದೆ. ತ್ವಿಶಿಯಲ್ಲಿ ನಾವು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಉತ್ಪನ್ನಗಳನ್ನು ಪೂರೈಸುತ್ತೇವೆ. ಗ್ರಾಹಕರಿಗೆ ಉತ್ತಮ ದರ್ಜೆಯ ಉತ್ಪನ್ನಗಳ ಪೂರೈಕೆ, ಉತ್ತಮ ಸೇವೆ ಮತ್ತು ಶಾಪಿಂಗ್‍ಗೆ ಚೇತೋಹಾರಿ ವಾತಾವರಣವನ್ನು ಒದಗಿಸುವುದು ತ್ವಶಿಯ ಗುರಿ’ ಎನ್ನುತ್ತಾರೆ ತ್ವಿಶಿ ಮಳಿಗೆಯ ಇನ್ನೋರ್ವ ಸಹ ಸಂಸ್ಥಾಪಕಿ ಮತ್ತು ಪಾಲುಗಾರರೂ ಆಗಿರುವ ವರ್ಷಾ ವೆಂಕಟೇಶ್”.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version