ದಿನದ ಸುದ್ದಿ

ಮೀನುಗಾರರ ಸಾಲಮನ್ನಾಮಾಡುವಂತೆ ಹೆಚ್ ಡಿ ಕೆ ಗೆ ಮನವಿ

Published

on

ಸುದ್ದಿದಿನ, ಬೆಂಗಳೂರು : ಮೈತ್ರಿ ಸರ್ಕಾರ ರಾಜ್ಯದ ರೈತರ ಸಾಲಾವನ್ನು ಮನ್ನಾ ಮಾಡಲು ತಯಾರಾಗಿದೆ. ಜತೆಗೆ ಮೀನುಗಾರರ ಸಾಲವನ್ನು ಮನ್ನಾ ಮಾಡುವಂತೆ ಉಡುಪಿಯ ಜಿಲ್ಲಾ ಮೀನುಗಾರರ ಸಂಘದ ನಿಯೋಗವು ಇಂದು (ಜುಲೈ 3) ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ‌ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಮೀನುಗಾರರ ಸಂಘದ ಮುಂದಾಳತ್ವವನ್ನು ಉಡುಪಿಯ ಬಿಜೆಪಿ ಶಾಸಕ ರಘಪತಿ ಭಟ್ ಮೀನುಗಾರರ ಆರ್ಥಿಕ ಸಂಕಷ್ಟಗಳ ಬಗೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿಳಿಸಿದರು. ಚಿಕ್ಕಮಗಳೂರು, ಮಂಗಳೂರು, ಉಡುಪಿ ಜಿಲ್ಲೆಯ ಶಾಸಕರುಗಳು ಈ ನಿಯೋಗದಲ್ಲಿದ್ದರು.

ಶಾಸಕ ರಘುಪತಿ ಭಟ್ ಮನವಿ ಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಮಾನ್ಯಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೀನುಗಾರರ ಸಾಲಾಮನ್ನಾ ಮನವಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version