ದಿನದ ಸುದ್ದಿ

ಬಂಡೀ‌ಪುರ ಅರಣ್ಯದಲ್ಲಿ ಸುಟ್ಟು ಕರಕಲಾಗಿರುವ ಪ್ರಾಣಿಗಳ ಫೋಟೋಗಳಲ್ಲ ಇವು ; ಸತ್ಯ ಮಾಹಿತಿ ಒಳಗಿದೆ ತಪ್ಪದೆ ಓದಿ..!

Published

on

ಸುದ್ದಿದಿನ ಡೆಸ್ಕ್ : ಕಳೆದ ಮೂರು ದಿನಗಳಿಂದ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಪರಿಣಾಮ ಗೋಪಾಲ ಸ್ವಾಮಿ ಬೆಟ್ಟದ ವಲಯದ ಸುಮಾರು 2ಸಾವಿರ ಹೆಕ್ಟೇರ್ ಅರಣ್ಯ ಸಂಪತ್ತು ಅಕ್ಷರಶಃ ಸುಟ್ಟು ಭಸ್ಮವಾಗಿದೆ.

ಈ ಕಾಡ್ಗಿಚ್ಚಿನ ಸುದ್ದಿ ಕೂಡ ಇಡೀ ಕರ್ನಾಟಕವನ್ನೆ ಬೆಚ್ಚಿ ಬೀಳಿಸಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅರಣ್ಯ ಸಂಪತ್ತು, ಪ್ರಾಣಿಗಳು ಸುಟ್ಟು ಕರುಕಲಾಗಿರುವ ಮನಕರಗುವ ಫೋಟೋಗಳೂ ಕೂಡ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿದೆ. ಆದರೆ ಈ ಫೋಟೋಗಳ್ಯಾವುವೂ ಬಂಡೀಪುರ ಅರಣ್ಯದ ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋದ ಪ್ರಾಣಿಗಳಲ್ಲ.

ಹೌದು ಬಂಡೀಪುರ ಅರಣ್ಯದಲ್ಲಿ‌ ಕಾಡ್ಗಿಚ್ಚು ರುದ್ರನರ್ತನ ಮಾಡುತ್ತಾ ಕರುಣೆಯೇ ಇಲ್ಲದೆ ತನ್ನ ಕೆನ್ನಾಲಿಗೆ ಚಾಚಿದೆ. ಮುಗಿಲೆತ್ತರಕ್ಕೆ ಬೆಳೆದ ಅಚ್ಚ‌ಹಸಿರು ಮರಗಳೆಲ್ಲ ಸುಟ್ಟು ಬೂದಿಯಾಗಿವೆ. ಆದರೆ ಅರಣ್ಯದ ವನ್ಯಜೀವಿಗಳಿಗೆಲ್ಲ ಯಾವುದೇ ಪ್ರಾಣಾಪವಾಗಿಲ್ಲ ಎಂಬ ಮಾಹಿತಿಯನ್ನು ಖಾಸಗಿ ಮಾದ್ಯಮವೊಂದಕ್ಕೆ ಅರಣ್ಯ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಪುನ್ನತಿ ಶ್ರೀಧರ್ ಅವರು ನೀಡಿದ್ದಾರೆ.

ಕಾಡ್ಗಿಚ್ಚಿನಿಂದ ಅರಣ್ಯ ನಾಶವಾಗಿದ್ದು, ಯಾವುದೇ ಪ್ರಾಣಿಗಳು ಬೆಂಕಿ ಅನಾಹುತಕ್ಕೆ ತುತ್ತಾಗಿರುವ ಬಗ್ಗೆ ಮಾಹಿತಿ ಇಲ್ಲ. ವನ್ಯ ಜೀವಿಗಳು ಬೆಂಕಿಯ ಶಾಖ ಮುಟ್ಟುತ್ತಿದ್ದಂತೆ ಓಡಿ ಹೋಗುತ್ಗವೆ ಎಂದಿದ್ದಾರೆ.

ಬೆಂಕಿಗೆ ಹಾವೊಂದು ಸುಟ್ಟು ಕರುಕಲಾಗಿರು ಹಾವಿನ ಫೋಟೋವು 2015 ಏಪ್ರಿಲ್ 24 ರಂದು ವಾಯುವ್ಯ ಕೊಲಂಬಿಯಾದಲ್ಲಿ ಆ್ಯಂಡಿಕ್ಯೂ ನದ್ದಾಗಿದೆ.

ಕಾಡ್ಗಿಚ್ವಿಗೆ ಸುಟ್ಟು ಕರಕಲಾಗಿರುವ ಮೊಲದ ಫೋಟೋವು 2018 ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಮಲಿಬುನದ್ದಾಗಿದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.dailymail.co.uk/news/article-6383809/Heartbreaking-images-animals-injured-California-wildfires-killed-44.html

ಗೊರಿಲ್ಲಾ ರೀತಿ ಕಾಣುವ ಒರಾಕುಟನ್ ಜಾತಿಗೆ ಸೇರಿದ ಈ ಪ್ರಾಣಿಯ ಚಿತ್ರವನ್ನು ಒರಾಗುಟನ್ ಸಂರಕ್ಷಣಾ ಕೇಂದ್ರ 2016ರಲ್ಲಿ ಬಿಡುಗಡೆ ಮಾಡಿತ್ತು. ಅಲ್ಲದೇ ಈ ಪ್ರಭೇದದ ಒರಾಕುಟನ್ ಬಂಡಿಪುರದಲ್ಲಿ ಕಂಡು ಬರುವುದಿಲ್ಲ ಇದು ಕೇವಲ ಬೋರೆನಾ ಸುಮಾತ್ರದಲ್ಲಿ ಕಂಡು ಬರುವ ಪ್ರಾಣಿ ಪ್ರಬೇಧ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://en.m.wikipedia.org/wiki/Orangutan

ಕ್ಯಾಲಿಫೋರ್ನಿಯಾದ ಕಾಡ್ಗಿಚ್ವಿಗೆ ಸುಟ್ಟು ಬೆಂದಿರುವ ಜಿಂಕೆ, ಮತ್ತು ಇತರೆ ಪ್ರಾಣಿಗಳ ಫೊಟೋ ವಿಡಿಯೋ 2017 ರದ್ದಾಗಿದೆ.

ವಿಡಿಯೋ ನೋಡಿ

https://goo.gl/images/hA8tvT

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version