ದಿನದ ಸುದ್ದಿ

ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ರೈತರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ : ತೋಟಗಾರಿಕೆ ಇಲಾಖೆಯು 2019-20ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ತಾಲ್ಲೂಕಿನ ರೈತರಿಗಾಗಿ ವಿವಿಧ ಕಾರ್ಯಕ್ರಮಗಳು ಮಂಜೂರಾಗಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಂಗಾಂಶ ಕೃಷಿ ಬಾಳೆ, ಹೈಬ್ರೀಡ್ ತರಕಾರಿ, ಕಾಳುಮೆಣಸು ಮತ್ತು ಕೋಕೋ ಪ್ರದೇಶ ವಿಸ್ತರಣೆ, ಕಾಳುಮೆಣಸು ಪುನಶ್ಚೇತನ, ಪುಷ್ಪ ಬೆಳೆ, ಕೃಷಿಹೊಂಡ ನಿರ್ಮಾಣ, ಶೇಡ್ ನೆಟ್ ನಿರ್ಮಾಣ, ಪ್ಲಾಸ್ಟಿಕ್ ಹೊದಿಕೆ ಬೆಳೆ, ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹನಿ ನೀರಾವರಿ, ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಗೇರು, ಮಾವು, ಸಪೋಟ ಇತ್ಯಾದಿ ಹೊಸ ಬೆಳೆ ಪ್ರದೇಶಗಳಿಗೆ ವಿಸ್ತರಣೆ, ಮಿನಿ ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ, ಪ್ಯಾಕ್ ಹೌಸ್‍ಗಳ ನಿರ್ಮಾಣಕ್ಕೆ ಅವಕಾಶವಿದ್ದು ಆಸಕ್ತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯಾ ಕಾರ್ಯಕ್ರಮಗಳಿಗೆ ನಿಗಧಿಯಾದ ಮಾರ್ಗಸೂಚಿ ಅನುಸಾರ ಅರ್ಜಿಗಳನ್ನು ಪರಿಗಣಿಸಲಾಗುವುದು. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-270415ಕ್ಕೆ ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version