ದಿನದ ಸುದ್ದಿ
ಮಂಡ್ಯ : ರೈತರಿಗೆ ಕಬ್ಬು ಬಾಕಿ ಕೊಡಯವಂತೆ ಡಿ.ಸಿ. ಆದೇಶ
ಸುದ್ದಿದಿನ, ಮಂಡ್ಯ : ಜಿಲ್ಲೆಯ 2018-19 ನೇ ಸಾಲಿನ ರೈತರ ಕಬ್ಬು ಬಾಕಿ 14 ದಿನದಲ್ಲಿ ಕೊಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಇಂದು ಡಿ.ಸಿ. ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ 4 ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 96.83 ಕೋಟಿ ರೂ ಬಾಕಿ ಬರಬೇಕಾಗಿದೆ. ಮದ್ದೂರು ತಾಲೂಕಿನ ಕೊಪ್ಪದ NSL ಕಾರ್ಖಾನೆಯಿಂದ 37.80 ಕೋಟಿ ರೂ, ಕೆ.ಎಂ. ದೊಡ್ಡಿಯ ಚಾಂಷುಗರ್ ನಿಂದ 25.80 ಕೋಟಿ ರೂ, ಕೆ.ಆರ್.ಪೇಟೆ ತಾಲೂಕಿನ ICL ಕಾರ್ಖಾನೆಯಿಂದ28.69 ಕೋಟಿ ರೂ,
ಹಾಗೂ ಮಂಡ್ಯದ ಸರ್ಕಾರಿ ಸ್ವಾಮ್ಯದ ಮೈ ಷುಗರ್ ನಿಂದ 4.84 ಕೋಟಿ ರೂ ಬಾಕಿ ಇದೆ.14 ದಿನದೊಳಗೆ ಬಾಕಿ ಪಾವತಿಸದಿದ್ದರೆ ದಾಸ್ತಾನುಗಳನ್ನು ಮುಟ್ಟು ಗೋಲು ಹಾಕುವುದಾಗಿ ಡಿ.ಸಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401