ಲೋಕಾರೂಢಿ
ತಪ್ಪದ ರೈತರ ‘ಸರದಿ ಸಾಲಿನ’ ನರಳಾಟ
“ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ”ಯೆಂದು ಪ್ರಧಾನಿ ನರೇಂದ್ರ ಮೋದಿಯವರು ಅರಿತುಕೊಂಡಿದ್ದಾರೆ. ರೈತರಿಗೆ ಸಹಾಯವಾಗಲೆಂದು ಪ್ರಧಾನಮಂತ್ರಿ ಕಿಸಾನ ಸನ್ಮಾನ ಯೋಜನೆಯನ್ನು ಜಾರಿಗೊಳಿಸಿದರು.
ಅದೇ ರೀತಿಯಲ್ಲಿ ಗ್ರಾಮಗಳಲ್ಲಿ ಇಂಟರ್ನೆಟ್ ಸಮಸ್ಯೆಯಾಗ ಬಾರದೆಂದು ಡಿಜಿಟಲ್ ಗ್ರಾಮಕ್ಕೆ ಅಡಿಗಲ್ಲು ಹಾಕಿ, ಗ್ರಾಮಗಳಲ್ಲಿ ಉಚಿತ ವೈಫೈನ ವ್ಯವಸ್ಥೆಯನ್ನು ಕಲ್ಪಿಸಿದರು. ಆದರು ಸಹ ಕೇಂದ್ರದಲ್ಲಿ ಜಾರಿಯಾದ ಯೋಜನೆಗಳು ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವೀಯಾಗಿ ಜಾರಿಗೊಳುತ್ತಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಸೇರಿಕೊಂಡು ರೈತರ ಅಭಿವೃದ್ಧಿಗೆ ಶ್ರಮಿಸುತ್ತೆವೆ ಎಂದು ಬರಿ ಬಾಯಿಮಾತಿನ ಆಶ್ವಾಸನೆಯನ್ನು ನೀಡುತ್ತಿದ್ದಾರೆ ವಿನಃ ಕಾರ್ಯರೂಪದಲ್ಲಿ ಬರುತ್ತಿಲ್ಲ. ಬಿ.ಎಸ್.ಎನ್.ಎಲ್ ಕಂಪನಿಯನ್ನು ಮೊದಲ ಸ್ವದೇಶಿಯ ಇಂಟರ್ನೆಟ್ ನ ಸಂಸ್ಥೆಯೆಂದು ಕರೆಯಲ್ಪಡುತ್ತದೆ.
ದೇಶದ ಎಲ್ಲಾ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ಕಂಪನಿಯ ಇಂಟರ್ ನೆಟ್ ಬಳಕೆಯನ್ನು ಆರಂಬಿಸಿದೆ. ಆದರೂ ಸಹ ರೈತರು ಪರದಾಡುವುದು ತಪ್ಪಿಲ್ಲ. ಪ್ರತಿದಿವು ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ತಾಲೂಕು ಪಂಚಾಯತಿ, ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ರೈತರ ಪಾಣೆಗಳನ್ನು ಪಡೆಯಲು ಸರದಿಸಾಲಿನಲ್ಲಿ ನಿಂತು ಕಾಯಬೇಕು.
ಏಕೆಂದರೆ ಪ್ರತಿದಿನವು ಒಂದಲ್ಲ ಒಂದು ಸಮಸ್ಯೆ, ಇಂಟರ್‍ನೆಟ್ ವ್ಯವಸ್ಥೆ ಇಲ್ಲ, ಸರ್ವರ್ ಬಿಜಿ ಹೀಗೆ ಅನೇಕ ಕಾರಗಳನ್ನು ನೀಡುತ್ತಾರೆ. ಪ್ರತಿದಿನವು ಈ ಕಾರಣಗಳನ್ನು ಕೇಳುತ್ತಾ ರೈತರು ರೋಸಿಹೊಗಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಇಬ್ಬರು ಸೇರಿ ಇದಕ್ಕೊಂದು ಪರ್ಯಾಯ ಉಪಾಯ ಹುಡುಕಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
–ಕಾಂಚನಾ. ಬಸವರಾಜ. ಪೂಜಾರಿ
ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ತೋರವಿ. ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9986715401