ಸಿನಿ ಸುದ್ದಿ

‘ಗಾಳಿಪಟ 2’ ಬಗ್ಗೆ ಭಟ್ಟರ ಪತ್ರ ; ನೀವೂ ಓದಿ..!

Published

on

ಸುದ್ದಿದಿನ ಡೆಸ್ಕ್ : ಮುಂಗಾರು ಮಳೆ ಸಿನೆಮಾದ ಯಶಸ್ಸಿನ ನಂತರ ಯೋಗರಾಜ್ ಭಟ್ಟರು ‘ಗಾಳಿಪಟ’ ಸಿನೆಮಾ ಮಾಡಿ ಜನಮಾನಸದಲ್ಲಿ ಉಳಿದದ್ದು ಇತಿಹಾಸ. ಈಗ ಭಟ್ಟರು ‘ಗಾಳಿಪಟ2’ ಸಿನೆಮಾ ಮಾಡಲು ತಯಾರಿ ನಡೆಸಿದ್ದಾರೆ.

ನಿನ್ನೆಯಷ್ಟೆ ಈ ಸಿನೆಮಾದ ಕುರಿತಾಗಿ ಅಧಿಕೃತವಾಗಿ ಕಾರ್ಯಕ್ರಮ ಮಾಡಿ ಸಿನೆಮಾದ ಮಾಹಿತಿಯನ್ನು ಹಂಚಿಕೊಂಡರು. ಮೊದಲ ಗಾಳಿಪಟ ಸಿನೆಮಾದಲ್ಲಿ ಇರುವಂತೆ ಇಲ್ಲಿಯೂ ಮೂವರು ನಾಯಕರು ಇರಲಿದ್ದಾರೆ. ಶರಣ್, ಪವನ್ ಕುಮಾರ್, ರಿಷಿ ನಾಯಕರಾಗಿ ಈ ಸಿನೆಮಾದಲ್ಲಿ ನಟಿಸಲಿದ್ದಾರೆ. ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ಹೊಸ ನಾಯಕಿ ಸೋನು ಆಯ್ಕೆಯಾಗಿದ್ದು ಇನ್ನು ಇಬ್ಬರು ನಾಯಕಿಯರ ತಲಾಶ್ ನಡೆದಿದೆಯಂತೆ. ಜತೆಗೇ ಈ ಸಿನೆಮಾದಲ್ಲೂ ಅನಂತನಾಗ್, ರಂಗಾಯಣರಘು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಅಂದಹಾಗೆ ಈ ಸಿನೆಮಾಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಇದು ಜನ್ಯ ಭಟ್ಟರ ಜೊಡಿಯ ಮೊದಲ ಸಿನೆಮಾವೂ ಕೂಡ. ಉಳಿದಂತೆ ಸಾಹಿತಿ ಜಯಂತ ಕಾಯ್ಕಿಣಿ ಯವರು ಹಾಡು ಬರೆಯವುದರ ಜತೆಗೆ,‌ಸಿನೆಮಾದ ಕಥಾ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ ಎಂದು ಭಟ್ಟರು ತಿಳಿಸಿದ್ದಾರೆ. ಹಾಗೇ ಈ ಸಿನೆಮಾ ಬಗ್ಗೆ ಬಟ್ಟರು ಪತ್ರವೊಂದನ್ನು ಬರೆದು ಮಾಹಿತಿಯನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೀಗಿದೆ ಪತ್ರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version