ಬಹಿರಂಗ
ಗಾಂಧಿಯನ್ನು ಎದೆಗಿಳಿಸಿಕೊಂಡವರಾರೂ ಬುದ್ಧನನ್ನ ಮುಟ್ಟಲಾರರು, ಬಾಬಾಸಾಹೇಬರ ಕಣ್ಣೀರ ಅರಿಯಲಾರರು
- ಹ.ರಾ.ಮಹಿಶ
ಸೇಫ್ ಝೋನ್ ನಲ್ಲಿ ದೂರದಿಂದ ನಿಂತು ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ ಮೈ ಹೊಳಪು, ಮತ್ತು ಸದ್ದಿಲ್ಲದೆ ಸರಸರ ಹರಿಯುವ ಅದರ ಚಮತ್ಕಾರ ಇವುಗಳು ಬಲು ಪ್ರಿಯವಾಗಿ ಕಂಡಿರಬೇಕು..!
ನಮಗೆ ಅದರ ಒಳಗಿನ ವಿಷದ ಕ್ರೂರ ಹಲ್ಲಿನ ದರ್ಶನವಾಗಿದೆ..!
ಮತ್ತು ಅದರಿಂದ ಕಚ್ಚಿಸಿಕೊಂಡು ಈಗಲೂ ಸಾಯುತ್ತಿದ್ದೇವೆ..!!!
ಗಾಂಧಿವಾದದಿಂದ ಅನ್ನ ಅಧಿಕಾರ ಪಡೆದ ಸ್ವಾರ್ಥಿಗಳು ಮತ್ತು , ಅವರಿಂದ ಏನೂ ಪಡೆಯದ ಏನೂ ಕಳೆದುಕೊಳ್ಳದ ಮುಗ್ಧ-ಮೂರ್ಖರು, ಈ ಎರಡೂ ಕೆಟಗರಿಯ “ಗಾಂಧೀ ಸಮರ್ಥಕರಿಗೆ” ಮತ್ತು ಅಡ್ಡಗೋಡೆ ಮೇಲೆ ದೀಪ ಇಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ತೆವಲುಳ್ಳ ಮೂರನೇ ಕೆಟಗರಿಯ ಜನರಿಗೆ ಗಾಂಧಿಯಿಂದ ಅನ್ಯಾಯಕ್ಕೊಳಗಾಗಿ ಇನ್ನಿನ್ನೂ ಅದರಿಂದ ನೋವುಣ್ಣುತ್ತಿರುವ ನಮ್ಮ ಸಂಕಟ ಅರ್ಥವಾಗದು..!!!
“ನೊಂದವರ ನೋವ ನೋಯದವರೆತ್ತ ಬಲ್ಲರು” ಎಂಬ
ನಾಡಿನ ಪ್ರಜ್ಞೆಯಾದ ಮಹಾತಾಯಿ ಅಕ್ಕ ಮಹಾದೇವಿಯವರ ಮಾತನ್ನಾದರೂ ಅರ್ಥ ಮಾಡಿಕೊಳ್ಳದ ಮೂಢರು ಅತಿಬುದ್ಧಿವಂತರಂತೆ ವರ್ತಿಸುತ್ತಿರುವುದಂತೂ ನಿಜಕ್ಕೂ ಅಸಹ್ಯವೆನಿಸುತ್ತಿದೆ…!
ಛೆ…
ಗಾಂಧಿ ಮತ್ತು ಅಂಬೇಡ್ಕರರ ಬಗ್ಗೆ ಯಾರೋ ಮೂರನೆಯವರು ಬರೆದ ಪುಸ್ತಕ ಓದಿಕೊಂಡು ಯಾರೋ ಹೇಳಿದ್ದನ್ನು ಕೇಳಿಕೊಂಡು ಶಾಂತಿಸೌಹಾರ್ಧಪ್ರಿಯರಂತೆ ಪೋಸು ಕೊಟ್ಟು ಆಧಾರ ಸಮೇತ ವಿಮರ್ಶಿಸುವುದನ್ನೇ “ದ್ವೇಷ” ಎಂದು ತೀರ್ಪುಕೊಟ್ಟು ಅಂಬೇಡ್ಕರ್ ವಾದಿಗಳನ್ನು ಅವರಿಗೆ ಒಗ್ಗದ ಹೆಸರುಗಳಿಂದ ಕರೆದು ಗಾಂಧಿಯನ್ನೇ ಉಸಿರಾಡುತ್ತಾ ಆಗಿಂದಲೂ ಬಡಬಡಿಸುತ್ತಿರುವ ಧೀರರೇ ಧೀರೆಯರೆ ಶೂರರೇ….
ಗಾಂಧಿಯವರನ್ನು ಕುರಿತು
ಗಾಂಧೀಯವರ ಇಬ್ಬಂದಿತನ ಕುರಿತು
ಗಾಂಧೀಯವರ ನಯವಂಚಕತನವನ್ನು ಕುರಿತು ಗಾಂಧಿಯವರಿಂದ ಸ್ವತಃ ಹಿಂಸೆ ನೋವು ಮೋಸಕ್ಕೆ ಒಳಗಾದ ಬಾಬಾಸಾಹೇಬರೇ ಬರೆದಿರುವ
“GANDHI AND GANDHIISM”
ಮತ್ತು ಬಾಬಾಸಾಹೇಬರ ಬರಹ ಭಾಷಣಗಳ ಸಂಪುಟ ೯
“WHAT GANDHI AND CONGRESS HAVE DONE TO UNTOUCHABLES” ಅನ್ನು ಓದಿದ್ದೀರಾ…?
ಮತ್ತು 1955 ರಲ್ಲಿ ಬಾಬಾಸಾಹೇಬರು BBC ಗಾಗಿ ನೀಡಿರುವ ಸಂದರ್ಶನದಲ್ಲಿ ಗಾಂಧಿಯವರ ಕುರಿತ 21 ನಿಮಿಷಗಳ ಖುದ್ದು ಬಾಬಾಸಾಹೇಬರ ಮಾತುಗಳನ್ನಾದರೂ ಕೇಳಿದ್ದೀರಾ…?
ಅವುಗಳನ್ನು ಓದಿಲ್ಲ ಕೇಳಿಲ್ಲವೆಂದರೆ ದಯಮಾಡಿ ಒಮ್ಮೆ ಓದಿ ಕೇಳಿ ನಂತರ ಬರೆಯಿರಿ…
ಅಕಸ್ಮಾತ್ ಓದಿಯೂ ಕೇಳಿಯೂ ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ನನ್ನದೇನೂ ತಕರಾರಿಲ್ಲ… ನಿಮ್ಮ ಅರೆಜ್ಞಾನಕ್ಕೆ ಪೂರ್ವಗ್ರಹಪೀಡಿತ ರೋಗಕ್ಕೆ ಕೃತಘ್ನತೆಗೆ ವಿಚಾರಹೀನ ಸಂವೇದನಾಹೀನ ಸ್ವತಂತ್ರ ಚಿಂತನಾಹೀನತೆಗೆ ಮರುಕ ಪಡುತ್ತೇನೆ.
ಗಾಂಧಿಯವರ ಇಬ್ಬಂದಿತನವನ್ನು ವಿರೋಧಿಸುತ್ತಲೇ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಮತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಅಷ್ಟೇ ಇನ್ನೇನೂ ಹೇಳಲಾಗದು..
ಸುದ್ದಿದಿನ.ಕಾಂ|ವಾಟ್ಸಾಪ್|9980346243