ದಿನದ ಸುದ್ದಿ

ಮೆಕ್ಕೆಜೋಳದ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ಪತ್ತೆ : ಪ್ರಕರಣ ದಾಖಲು

Published

on

ಸುದ್ದಿದಿನ,ಶಿವಮೊಗ್ಗ : ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್‍ಕುಮಾರ್ ಜಿ ಎ, ನಿರ್ದೇಶನದ ಮೇರೆಗೆ ಸಾಗರ ತಾಲ್ಲೂಕು, ಕೆರೆಗದ್ದೆ ಗ್ರಾಮದ ದೇವರಾಜ ಎಂಬುವವರಿಗೆ ಸೇರಿದ ಮೆಕ್ಕೆಜೋಳದ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು ರೂ. 20,000/- ಬೆಲೆ ಬಾಳುವ 04 ಗಾಂಜಾ ಗಿಡಗಳನ್ನು ಪತ್ತೆಹಚ್ಚಿ, ವಶಪಡಿಸಿಕೊಂಡು ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ.

ಈ ಪ್ರಕರಣದ ಆರೋಪಿಯಾದ ದೇವರಾಜ ಬಿನ್ ಮಂಜಪ್ಪ ಪರಾರಿಯಾಗಿದ್ದು, ಆರೋಪಿಯನ್ನು ತನಿಖಾ ಸಂದರ್ಭದಲ್ಲಿ ಬಂದಿಸಬೇಕಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಡಿ.ಎನ್ ಹನುಮಂತಪ್ಪ, ಅಬಕಾರಿ ನಿರೀಕ್ಷಕರು, ಜಾನ್ ಪಿ.ಜೆ, ಅಬಕಾರಿ ಉಪ ನಿರೀಕ್ಷರು ಮತ್ತು ಅಬಕಾರಿ ರಕ್ಷಕರಾದ ರಾಜಮ್ಮ, ಚಂದ್ರಪ್ಪ, ಮುದಾಸಿರ್ ಅಹಮ್ಮದ್, ದೀಪಕ್ ಮಹಬಲೇಶ್ವರ, ಬಸವರಾಜ ಹಾಗೂ ವಾಹನ ಚಾಲಕ ಅರ್ಜುನ್ ಇತರ ಅಬಕಾರಿ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version