ದಿನದ ಸುದ್ದಿ

ಮೋಟಿವೇಷನಲ್ ಸ್ಕ್ರಿಪ್ಟ್ ವತಿಯಿಂದ ‘ಗೀತಾ ಆನಘ’ ಅವರಿಗೆ ಸನ್ಮಾನ

Published

on

ಸುದ್ದಿದಿನ ಡೆಸ್ಕ್ : ಭದ್ರಾವತಿ ಮೂಲದ, ಪ್ರತಿಬಿಂಬ ಬಳಗ ದಿ ವಾಯ್ಸ್ ಆಫ್ ಟ್ಯಾಲೆಂಟ್ ನ ಖ್ಯಾತಿಯ, ಯಶಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಗೀತಾ ಆನಘ( Geetha Anagha) ಅವರಿಗೆ ಮೋಟಿವೇಷನಲ್ ಸ್ಟ್ರಿಪ್ಟ್ (Motivational Script) ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರಿನ ಸೌಂದರ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ, ಗುಜರಾತ್ ಸಾಹಿತ್ಯ ಅಕಾಡೆಮಿ ಹಾಗೂ ವಿಶ್ವದ ಅತಿ ದೊಡ್ಡ ಬರಹಗಾರರ ವೇದಿಕೆ ಮೋಟಿವೇಷನಲ್ ಸ್ಟ್ರಿಪ್ಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬರಹಗಾರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸ್ವಾತಂತ್ರ್ಯ ದಿನದ ಸವಿನೆನಪಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ವಿಷ್ಣು ಪಾಂಡೆ, ಮೋಟಿವೇಷನಲ್ ಸ್ಟೆಪ್ಸ್ ನ ಸಂಸ್ಥಾಪಕರಾದ ಶ್ರೀಯುತ ಸಿಜು ಪಲಿತಾಜ್ , ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ಲನ ಡಾ. ಶಿವಕುಮಾರ್ ನಾಗರನವಿಲೆ, ನೇಪಾಳದ ಇಂಗ್ಲಿಷ್ ಸಾಹಿತ್ಯದ ಪ್ರಸಿದ್ಧ ಬರಹಗಾರರಾದ ಕೆಮಿಲ್ ಪೋಕ್ರಿಯಲ್, ಮಲೇಷ್ಯಾದ ಪ್ರಸಿದ್ಧ ಬರಹಗಾರ್ತಿ ಡಾ. ರಾಜರಾಜೇಶ್ವರಿ ಸೀತಾರಾಮನ್, ಭಾರತದ ಆಂಗ್ಲ ಹಾಗೂ ಹಿಂದಿ ಸಾಹಿತ್ಯದಲ್ಲಿ ಹೆಸರು ಮಾಡಿರುವ ಸ್ವಪ್ನ ಬೆಹೆರಾ, ಅತಿಥಿ ಗಣ್ಯರಾಗಿದ್ದರು .

ದೇಶ ವಿದೇಶಗಳಿಂದ ಆಗಮಿಸಿದ್ದ ಬರಹಗಾರರನ್ನು ಸನ್ಮಾನಿಸುವ ಈ ಕಾರ್ಯಕ್ರಮ ಅತ್ಯಂತ ಸ್ಮರಣೀಯವಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಪುಸ್ಕ ಕೌನ್ಸಿಲ್ ನ ಅಧ್ಯಕ್ಷರಾದ ಡಾ. ಶಿವಕುಮಾರ್ ನಾಗರನವಿಲೆ ಅತಿಥಿ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ಕಾರ್ಯಕ್ರಮ ಅತ್ಯಂತ ಸ್ಮರಣೀಯ, ವಿಶ್ವದ ಎಲ್ಲ ಬರಹಗಾರರನ್ನು ಒಂದೇ ನೋಡುವ ಹಾಗೂ ಅವರನ್ನು ಸನ್ಮಾನಿಸುವ ಸೌಭಾಗ್ಯ ನನ್ನದು ಎಂದರು.

ಭಾರತದ ಅತ್ಯಂತ ಪ್ರಭಾವಿ, ಲೇಖಕ ಕವಿ ರಾಜಕೀಯ ವಿಶ್ಲೇಷಕ ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ವಿಷ್ಣುಪಾಂಡೆ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ನೆನಪಿನ ನುಡಿಯುವಂತದ್ದು ಎಂದರು.

ಇದೇ ಸಂದರ್ಭದಲ್ಲಿ ದುಬೈನಾ ಶೇಕ್ ಸಭಾಂಗಣದಲ್ಲಿ ನವಂಬರ್ 19ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಿರುವ ವಿಶ್ವಕನ್ನಡ ಹಬ್ಬಕ್ಕೆ , ದೇಶ ವಿದೇಶಗಳಿಂದ ಆಗಮಿಸಿದ ಬರಹಗಾರರು ಅತಿಥಿಗಳನ್ನು ಆಮಂತ್ರಿಸಿದರು. ಕಾರ್ಯಕ್ರಮವನ್ನು ಆಯೋಜಿಸಿ, ನಿರೂಪಿಸಿದ ಶ್ರೀಕಲಾ ಪಿ ವಿಜಯನ್ ಕಾರ್ಯ ಪ್ರಶಂಷನೀಯ‌ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version