ದಿನದ ಸುದ್ದಿ

ತಪ್ಪದೇ ಬಳಸಿ ತುಪ್ಪ | ಆರೋಗ್ಯಕ್ಕೆ ಅತೀ ಅಗತ್ಯ ; ತಿಳಿಯಿರಿ ತುಪ್ಪದ ಮಹತ್ವ

Published

on

ನಾವು ಅಡುಗೆಯಲ್ಲಿ ಬಳಸುವಂತಹ ತುಪ್ಪದಲ್ಲಿ ಹಲವಾರು ಬಗೆಯ ಆರೋಗ್ಯ ಗುಣಗಳು ಇವೆ. ತುಪ್ಪವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಂಡು ಬಂದಿದೆ. ಶುದ್ಧ ದೇಶಿ ತುಪ್ಪವನ್ನು ಬಳಸಿದರೆ ಆರೋಗ್ಯ ವೃದ್ಧಿಸುತ್ತದೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವನೆ ಮಾಡಿದರೆ ದೇಹಕ್ಕೆ ನಾನಾ ರೀತಿಯ ಲಾಭಗಳು ಆಗುತ್ತವೆ. ಹಾಗಾದರೆ ತುಪ್ಪ ಸೇವನೆ ಮಾಡಿದರೆ ದೇಹಕ್ಕೆ ಆಗುವ ಲಾಭಗಳ ಬಗ್ಗೆ ತಿಳಿಯಿರಿ.

ತುಪ್ಪ ಸೇವನೆಯಿಂದ ಜೀರ್ಣಕ್ರಿಯೆ ಕಿಣ್ವವು ಸ್ರವಿಸುವುದನ್ನು ಉತ್ತೇಜಿಸಿ ಜೀರ್ಣಕ್ರಿಯೆಯು ಸರಾಗವಾಗುವುದು. ಜೀರ್ಣಕ್ರಿಯೆ ಆಮ್ಲವನ್ನು ಉತ್ಪತ್ತಿ ಮಾಡಲು ಇದು ಸಹಕಾರಿ.

ತುಪ್ಪದಿಂದ ಆ ದಿನದ ಆರಂಭ ಮಾಡಿದರೆ ಆಗ ದೇಹಕ್ಕೆ ಶಕ್ತಿ ಸಿಗುವುದು. ದೇಹವು ತುಂಬಾ ಉಲ್ಲಾಸ ಮತ್ತು ಕೇಂದ್ರೀಕೃತವಾಗಿರಲು ಸಹಕಾರಿ.

ತುಪ್ಪವು ತೂಕ ಹೆಚ್ಚಿಸುವುದು ಎನ್ನುವ ತಪ್ಪು ಕಲ್ಪನೆಯು ಇದೆ. ಆದರೆ ಮಿತವಾಗಿ ಸೇವಿಸಿದರೆ ತೂಕ ನಿರ್ವಹಿಸಲು ಸಹಕಾರಿ.

ತುಪ್ಪದಲ್ಲಿ ಇರುವ ಕೊಬ್ಬು ಮೆದುಳಿನ ಆರೋಗ್ಯಕ್ಕೆ ಅತೀ ಅಗತ್ಯ. ಮೆದುಳಿನ ಅಂಗಾಂಶಗಳು ಬೆಳವಣಿಗೆ ಆಗಲು ಹಾಗೂ ಸರಿಯಾಗಿ ನಿರ್ವಹಿಸಿ ಪೋಷಕಾಂಶಗಳನ್ನು ಒದಗಿಸುವುದು.

ತುಪ್ಪದಲ್ಲಿ ಬ್ಯುಟರಿಕ್‌ ಆಮ್ಲವಿದ್ದು, ಇದು ಸಣ್ಣ ಸರಪಳಿ ಕೊಬ್ಬಿನಾಮ್ಲ, ಉರಿಯೂತ ಶಮನಕಾರಿ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವ ಗುಣಗಳು ಇವೆ.

ಹಾರ್ಮೋನ್‌ ಉತ್ಪಾದನೆ ಮತ್ತು ನಿಯಂತ್ರಣಕ್ಕೆ ಆರೋಗ್ಯಕಾರಿ ಕೊಬ್ಬು ಅಗತ್ಯ. ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸಿದರೆ ಹಾರ್ಮೋನ್‌ ಮಟ್ಟವನ್ನು ನಿಯಂತ್ರಿಸುತ್ತದೆ.

ತುಪ್ಪದಲ್ಲಿ ವಿಟಮಿನ್‌ ಎ, ಡಿ, ಇ ಮತ್ತು ಕೆ ಜೊತೆಗೆ ಆ್ಯಂಟಿಆಕ್ಸಿಡೆಂಟ್‌ ಉತ್ತಮ ಪ್ರಮಾಣದಲ್ಲಿದೆ. ಇದು ಚರ್ಮಕ್ಕೆ ಪೋಷಣೆ ನೀಡುವುದು ಹಾಗೂ ಆರೋಗ್ಯವಾಗಿಡುವ ಜತೆಗೆ ಕಾಂತಿ ಒದಗಿಸುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version