ಲೈಫ್ ಸ್ಟೈಲ್
ಬಹುಪಯೋಗಿ ಶುಂಠಿ..!
ಶುಂಠಿಯನ್ನು ನಾವು ಪ್ರತಿ ದಿನ ಆಹಾರದಲ್ಲಿ ಬಳಸುತ್ತಿದ್ದೀವಿ. ಕೆಲವೊಮ್ಮೆ ಅದನ್ನು ಸ್ವಾದಕ್ಕಾಗಿ ಬಳಸಿದರೆ ಇನ್ನೂ ಕೆಲವೊಮ್ಮೆ ಜೀರ್ಣಾಕ್ಕೆ ಒಳ್ಳೆಯದು ಅಂತ ಬಳಸಲಾಗುತ್ತದೆ. ನಮ್ಮಗೆ ಅದರ ಇನ್ನೂ ಕೆಲವು ಉಪಯೋಗ ಗೊತ್ತಾದರೆ ಒಳ್ಳೆಯದು ಅಲ್ಲವೇ.
ಇಲ್ಲಿವೆ ನೋಡಿ ಕೆಲವು ಉಪಯೋಗಳು
- ಊಟದ ಮಂಚೆ ಅವರೆಕಾಳಿನಷ್ಟು ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣ ತೊಂದರೆ ದೂರವಾಗುತ್ತದೆ.
- ಅರ್ಧ ಬೆರಳಿನಷ್ಟು ಉದ್ದದ ಹಸಿಶುಂಠಿಯನ್ನು ಚೆನ್ನಾಗಿ ಅರೆದು ನೀರಿಗೆ ಕದಡಿ ನಂತರ ಶೋಧಿಸಿ. ಜೇನು ತುಪ್ಪ ಮತ್ತು ನಿಂಬೆರಸವನ್ನು ಅದಕ್ಕೆ ಬೆರೆಸಿ ಸೇವಿಸುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರದ ನಿವಾರಣೆಯಾಗುತ್ತದೆ.
- ತಲೆನೋವಿಗೆ ಹಸಿಶುಂಠಿಯನ್ನು ನೀರಿನಲ್ಲಿ ತೇದು ಆ ಗಂಧವನ್ನು ಹಣೆಗೆ ಹಚ್ಚಿ ಬೆಚ್ಚಗೆ ಹೊದ್ದು ಮಲಗಿಕೊಂಡರೆ ಸ್ವಲ್ಪ ಸಮಯದ ನಂತರ ಬೆವರು ಸುರಿದು ಹೋಗಿ ನೋವು ಮಾಯವಾಗಿ ಹೋಗುತ್ತದೆ.
- ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.
- ಪ್ರತಿ ಊಟದ ನಂತರ ಒಂದು ಶುಂಠಿ ಅಗಿದು ಚಪ್ಪರಿಸುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ಮತ್ತು ಅಜೀರ್ಣ ಹಾಗೂ ಪಿತ್ತದ ನಿವಾರಣೆಯಾಗುತ್ತದೆ.
- ಮಕ್ಕಳಿಗೆ ಹಸಿಶುಂಠಿಯ ರಸವನ್ನು ಜೇನು ತುಪ್ಪದಲ್ಲಿ ಬೆರೆಸಿ ಕೊಡುವುದರಿಂದ ಕರುಳು ಮತ್ತು ಜಠರಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುವುವು.
- ಅನೇಕ ಕಾಯಿಪಲ್ಯೆಯನ್ನು ನಾವು ಉಪಯೋಗಿಸಿದಾಗ ಅನಿಲೋತ್ಪತ್ತಿಯಾಗುತ್ತದೆ. ಇಂತಹ ಗ್ಯಾಸ್ ಕರುಳಿನಲ್ಲಿ ಒಟ್ಟುಗೂಡಿದರೆ ಅನಾರೋಗ್ಯವಗುತ್ತದೆ. ಆಗ ಹಸಿಶುಂಠಿಯನ್ನು ಅರೆದು ಅದರ ರಸವನ್ನು ಜೇನುತುಪ್ಪದಲ್ಲಾಗಲೀ, ಹಾಲುನಲ್ಲಿಯಾಗಲೀ ಸೇವಿಸಿದರೆ ಈ ದೋಷ ದೂರವಾಗುವುದು.
- ಒಂದು ಬಟ್ಟಲು ಆಗ ತಾನೆ ಹಿಂಡಿದ ಹಸುವಿನ ಹಾಲಿಗೆ ಒಂದು ಚಮಚ ಒಣಶುಂಠಿಯ ಚೂರ್ಣವನ್ನು ಕದಡಿ ವಾರದವರೆಗೆ ಕ್ರಮವಾಗಿ ಸೇವಿಸಿದರೆ ಅರಿಸಿನ ಕಾಮಾಲೆಯ ರೋಗ ನಿವಾರಣೆಯಾಗುತ್ತದೆ.
- ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲುನೋವು ಉಪಶಮನವಾಗುವುದು.
- ನಾಲಿಗೆಗೆ ರುಚಿ ಇಲ್ಲದಂತಾಗಿರುವಾಗ ಒಂದು ಚೂರು ಹಸಿಶುಂಠಿ ಸ್ವಲ್ಪ ಕಾಳು ಜೀರಿಗೆ ಮತ್ತು ಕಲ್ಲುಸಕ್ಕರೆಯನ್ನು ಚೆನ್ನಾಗಿ ಅಗಿದು ಚಪ್ಪರಿಸುವುದರಿಂದ ರುಚಿ ಗ್ರಹಣ ಶಕ್ತಿ ಅಧಿಕಗೊಳ್ಳವುದು.
- ಒಂದು ಟೀ ಚಮಚ ಹಸಿಶುಂಠಿ ರಸ,ಎರಡು ಟೀ ಚಮಚ ನಿಂಬೆ ಹಣ್ಣಿನ ರಸ, ಎರಡು ಟೀ ಚಮಚ ಪುದೀನಾ ಸೊಪ್ಪಿನ ರಸ ಹಾಗೂ ಎಂಟು ಟೀ ಚಮಚ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಮೂಲವ್ಯಾಧಿ, ಮಲಬದ್ಧತೆ, ಹೊಟ್ಟೆ ಉಬ್ಬರದ ನಿವಾರಣೆಯಾಗುವುದು.
- ಗಂಟಲು ಒಡೆದು ಮಾತನಾಡಲು ಕಷ್ಟವಾದಾಗ ಸ್ವಲ್ಪ ಶುಂಠಿ, ಒಂದೆರಡು ಲವಂಗ ಮತ್ತು ನಾಲ್ಕು ಉಪ್ಪಿನ ಹರಳುಗಳನ್ನು ಅಗಿದು ಚಪ್ಪರಿಸಿದರೆ ಗುಣವಾಗುತ್ತದೆ.
- ಮಳೆಯಲ್ಲಿ ನೆನೆದು ದೇಹಾಲಸ್ಯ ಉಂಟಾಗಿದ್ದರೆ ಹಸಿ ಶುಂಠಿಯ ಕಷಾಯ ತಯಾರಿಸಿ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ದೇಹಾಲಸ್ಯ ದೂರವಾಗುವುದು.
- ಶುಂಠಿಯಲ್ಲಿರುವ ಪೋಷಕಾಂಶಗಳು ರಕ್ತದ ಪರಿಚಲನೆಯನ್ನು ಚುರುಕುಗೊಳಿಸಿ ಅಂಗಾಂಗಳ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಶುಂಠಿಯ ಸೇವನೆಯ ಪ್ರಯೋಜನಗಳಲ್ಲಿ ಇದು ಅತ್ಯುತ್ತಮವಾದುದು.