ದಿನದ ಸುದ್ದಿ

ಗಡಿ ಜಿಲ್ಲೆಗಳ 38 ಸರ್ಕಾರಿ ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯ ಆರಂಭ : ಟಿ.ಎಸ್.ನಾಗಾಭರಣ

Published

on

ಸುದ್ದಿದಿನ ಡೆಸ್ಕ್ : ಗಡಿ ಜಿಲ್ಲೆಗಳ 38 ಸರ್ಕಾರಿ ಶಾಲೆಗಳಲ್ಲಿ (Government schools ) ಭಾಷಾ ಪ್ರಯೋಗಾಲಯ (Language Lab ) ಆರಂಭಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ            ( T. S.Nagabharana ) ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬುಧವಾರ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗಡಿ ಜಿಲ್ಲೆಗಳಲ್ಲಿ ಮಕ್ಕಳ ಮಾತೃಭಾಷೆ ಮತ್ತು ಶಿಕ್ಷಣ ಮಾಧ್ಯಮದ ನಡುವೆ ಇರುವ ಗೊಂದಲ ಹೋಗಲಾಡಿಸುವ ದೃಷ್ಟಿಯಿಂದ 19ಗಡಿ ಜಿಲ್ಲೆಗಳ 38 ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಇದನ್ನೂ ಓದಿ | ರೈಲು ಪ್ರಯಾಣ : ಐದು ವರ್ಷದೊಳಗಿನ ಮಕ್ಕಳ ಟಿಕೆಟ್ ಕುರಿತಂತೆ ಬದಲಾವಣೆ ಇಲ್ಲ

1 ನೇ ತರಗತಿಯಿಂದ 8 ನೇ ತರಗತಿ ಮಕ್ಕಳ ಭಾಷಾ ಕಲಿಕೆಯ ಮೇಲೆ ಈ ಪ್ರಯೋಗಾಲಯ ಸಕಾರಾತ್ಮಕ ಪರಿಣಾಮ ಬೀರಲಿದೆ. ಪ್ರಯೋಗಾಲಯಕ್ಕೆ ಅಗತ್ಯವಿರುವ ಪಠ್ಯಕ್ರಮಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಇಲಾಖೆಗಳಲ್ಲಿ ಕನ್ನಡವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ರೂಪಿಸಲಾಗಿರುವ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version