ದಿನದ ಸುದ್ದಿ

‘ಗೃಹಜ್ಯೋತಿ’ ಯೋಜನೆ ; ಇಂದಿನಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ’ಗೃಹಜ್ಯೋತಿ’ ಯೋಜನೆ ಜಾರಿಗೆ ಇಂದಿನಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಈ ಯೋಜನೆಯಡಿ ಫಲಾನುಭವಿಗಳ ನೋಂದಣಿ ಇಂದಿನಿಂದ ಆರಂಭವಾಗಿದೆ. ಸೇವಾಸಿಂಧು https://sevasindhuservices.karnataka.gov.in/ ಜಾಲತಾಣದಲ್ಲಿ ಹೆಸರು ನೋಂದಾಯಿಸಬಹುದು.

ಯೋಜನೆಯಡಿ ಈ ಹಿಂದೆ ಬಳಸುತ್ತಿದ್ದ 12 ತಿಂಗಳುಗಳ ಸರಾಸರಿ ವಿದ್ಯುತ್ ವಿನಿಮಯದ ಮೇಲೆ ಶೇಕಡ 10 ರಷ್ಟು ಹೆಚ್ಚು ಯುನಿಟ್‌ಗಳ ಬಳಕೆಗೆ ಮಾತ್ರ ರಾಜ್ಯ ಇಂಧನ ಸಚಿವಾಲಯ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version