ದಿನದ ಸುದ್ದಿ
ಡಾ.ರಾಜ್ ಗೀತೆಗಳನ್ನ ಹಾಡಿ ರಂಜಿಸಿದ ಸಚಿವ ಜಿ.ಟಿ.ದೇವೇಗೌಡ
ಸುದ್ದಿದಿನ ಡೆಸ್ಕ್ : ವರನಟ ಡಾ, ರಾಜ್ ಕುಮಾರ್ ಚಿತ್ರಗೀತೆಗಳನ್ನ ಸ್ಮರಿಸಿದ ಸಚಿವ ಜಿ.ಟಿ. ದೇವೇಗೌಡ ಅವರು ಸತ್ಯಹರಿಶ್ಚಂದ್ರ, ಕಸ್ತೂರಿ ನಿವಾಸದ ಎರಡು ಚಿತ್ರಗಳನ್ನ ಹಾಡಿ ಸಂಗೀತ ರಸಿಕರ ಗಮನಸೆಳೆದರು.
ನಮೋ ಭೂತನಾಥ, ನಮೋ ದೇವಾದೇವಾ, ನಮೋ ಭಕ್ತ ಪಾಲ, ನಮೋ ನಿರ್ವಿಕಾರ,, ಎಂಬ ಸತ್ಯಹರಿಶ್ಚಂದ್ರ ಚಿತ್ರದ ಹಾಡು ಮತ್ತು ಕಸ್ತೂರಿ ನಿವಾಸದ ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು ಎಂಬ ಗೀತೆ ಹಾಡಿದ ಜಿಟಿಡಿ ಅವರು ಸಂಗೀತ ಪ್ರೀಯರ ಒತ್ತಾಯದ ಮೇರೆಗೆ ವೇದಿಕೆ ಏರಿ ಹಳೆಯ ಚಿತ್ರಗೀತೆಗಳನ್ನ ಸೊಗಸಾಗಿ ಹಾಡಿದರು.
ಲಯ ವಿದ್ಯಾ ಪ್ರತಿಷ್ಠಾನ (ರಿ)ವತಿಯಿಂದ ಕೃಷ್ಣಮೂರ್ತಿ ಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಾನ ಸುಧೆ ಹರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401