ಲೈಫ್ ಸ್ಟೈಲ್

ಬಡವರ ಸೇಬು ‘ಪೇರಲೆ’ ಹಣ್ಣು ತಿನ್ನಿ ಆರೋಗ್ಯವಾಗಿರಿ

Published

on

ಇತ್ತೀಚಿನ ದಿನಗಳಲ್ಲಿ “ಕಿವಿ ಹಣ್ಣು” ತುಂಬಾ ಬಳಕೆಯಾಗುತ್ತಿದೆ. ಅದಕ್ಕೆ ಕಾರಣ ಅನಾರೋಗ್ಯದಿಂದ ನರಳುವವರಿಗೆ ಹಿಂದೆಲ್ಲಾ ಆಪಲ್, ಮೂಸಂಬಿ, ಕಿತ್ತಳೆ ತಿನ್ನಿ ಏನುತ್ತಿದ್ದ ವೈದ್ಯರು ಈಗ ವಿಟಮಿನ್ ಸಿ ಮತ್ತು ಅಧಿಕ ಪೋಷಕಾಂಶವಿರುವ ನ್ಯೂಜಿಲೆಂಡ್ ಮೂಲದ “ಕಿವಿ ಹಣ್ಣು” ಬಳಸಲು ಸೂಚಿಸುತ್ತಿದ್ದಾರೆ.

ಅದರ ಬೆಲೆಯೋ ಮೂರು ಹಣ್ಣಿಗೆ ಕೆಲವೊಂದು ಕಡೆ 200/ ರೂ.ದಾಟಿದೆ. ಅಷ್ಟೊಂದು ದುಬಾರಿಯಾಗಿರುವ ಆ ಹಣ್ಣಿನಲ್ಲಿ ಅಂತಹ ವಿಶೇಷವಾದರೂ ಏನಿದೆ ಎಂದು ಅದರಲ್ಲಿರುವ ನ್ಯೂಟ್ರಿಷನ್ ಫ್ಯಾಕ್ಟ್ ಚೆಕ್ ಮಾಡಿದೆ. ವಿಟಮಿನ್ ಗಳು, ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ ಪ್ರಮಾಣ ನೋಡಿ ಪಿಚ್ಚೆನಿಸಿತು.

ಯಾಕೆಂದರೆ ಬಡವರ ಸೇಬು “ಪೇರಲೆ (ಸೀಬೆ) ಹಣ್ಣಿ”ನಲ್ಲಿ ಈ ಸೆಲೆಬ್ರಿಟಿ “ಕಿವಿ ಹಣ್ಣಿ”ಗಿಂತ ಅಧಿಕ ವಿಟಮಿನ್ ಮತ್ತು ಪೋಷಕಾಂಶಗಳಿವೆ.

100 ಗ್ರಾಂ “ಕಿವಿ ಹಣ್ಣು ಮತ್ತು ಪೇರಲೆ ಹಣ್ಣಿ”ನಲ್ಲಿರುವ ನ್ಯೂಟ್ರಿಷನ್ ಫ್ಯಾಕ್ಟ್ ಎನಿದೆ ಒಮ್ಮೆ ನೀವೆ ನೋಡಿ..

ಕಿವಿ ಹಣ್ಣು- ಪೇರಲೆ ಹಣ್ಣು

ವಿಟಾಮಿನ್ ಸಿ. 154%. 380%
ವಿಟಾಮಿನ್ ಎ. 1%. 12%
ವಿಟಾಮಿನ್ ಬಿ6. 5%. 5%
ಪ್ರೋಟೀನ್. 2%. 5%
ಫೈಬರ್. . 12%. 20%
ಪೊಟ್ಯಾಷಿಯಂ. 8%. 11%
ಕಾರ್ಬೋಹೈಡ್ರೇಟ್. 5%. 4%
ಮೆಗ್ನೀಷಿಯಂ. 4%. 5%
ಕ್ಯಾಲ್ಸಿಯಂ. 3%. 1%
ಐರನ್. 1%. 1%
ಕ್ಯಾಲರೀಸ್. 61. 68

ಕಿವಿ ಹಣ್ಣಿಗಿಂತಲೂ ಹೇರಳ ವಿಟಾಮಿನ್ ಫೈಬರ್ ಇತ್ಯಾದಿ ಅಂಶಗಳಿದ್ದರೂ ಯಾವ ಡಾಕ್ಟರ್ ಪೇರಲೆಯನ್ನು ಶಿಫಾರಸು ಮಾಡುವುದಿಲ್ಲ. ಮತ್ತು ಬಹುಶಃ ಕಡಿಮೆ ದರದಲ್ಲಿ ದೊರಕುವ ವಸ್ತುಗಳು ಕಡಿಮೆ ಕ್ವಾಲಿಟಿ ಇರುತ್ತವೆಂಬ ಸಾರ್ವತ್ರಿಕ ನಂಬಿಕೆಯೋ? ಅಥವಾ ಬೀಜಗಳು ಹಲ್ಲಿನಲ್ಲಿ ಸಿಕ್ಕಿಕೊಳ್ಳುತ್ತವೆಂಬ ಕಾರಣವೋ? ಎಲ್ಲರೂ ಇಷ್ಟ ಪಟ್ಟು ತರುವ ಹಣ್ಣುಗಳ ಪಟ್ಟಿಯಲ್ಲಿ ಪೇರಲೆ ಹಣ್ಣಿಗೆ ಜಾಗವಿರುವುದಿಲ್ಲ. ಅದಕ್ಕೆ ಹಿರಿಯರು ಹೇಳಿದ್ದ ಮಾತು “ಹಿತ್ತಲ ಗಿಡ ಮದ್ದಲ್ಲ” ಎಂಬುದು ನಿಜ.

ಯಾರೇನೆ ಹೇಳಲಿ ಪ್ರತಿ ದಿನ ಒಂದು “ಬಡವರ ಸೇಬು ಪೇರಲೆ ಹಣ್ಣ”ನ್ನು ತಿನ್ನಿ ಆರೋಗ್ಯವಾಗಿರಿ..

ಅಮರೇಶ ದೇಸಾಯಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version