/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಬ್ರೇಕಿಂಗ್ | ಡ್ರಾಪ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಗೂಳಿಹಟ್ಟಿ 

Published

on

ಸುದ್ದಿದಿನ ಡೆಸ್ಕ್ : ಶಾಸಕ ಸುಧಾಕರ್ ಅವರನ್ನು ಡ್ರಾಪ್ ಮಾಡಲು ಹೋಗಿ ಹೊಸದುರ್ಗದ ಬಿಜೆಪಿ ಶಾಸಕ ಡಿ.ಸುಧಾಕರ್ ಪೇಚಿಗೆ ಸಿಲುಕಿದ್ದಾರೆ.

ಮಂಗಳವಾರ ಸಚಿವ ಡಿಕೆ.ಶಿವಕುಮಾರ್ ಆಯೋಜಿಸಿದ್ದ ಔತಣಕೂಡದಲ್ಲಿ ಗೂಳಿಹಟ್ಟಿ ಶೇಖರ್ ಅವರು ಹೋಗಿದ್ದು, ಕಾಂಗ್ರೆಸ್ ಸೇರುತ್ತಾರೆ ಎಂಬ ಅನುಮಾನದ ವಾತಾವರಣ ಸೃಷ್ಟಿಯಾಗಿತ್ತು. ಈಗ ಸ್ವತಃ ಗೂಳಿಹಳ್ಳಿ ಶೇಖರ್ ಸ್ಪಷ್ಟನೆ ನೀಡಿದ್ದು, ನಾನು ಸುಧಾಕರ್ ಅವರನ್ನು ಡ್ರಾಪ್ ಮಾಡಲು ಅಲ್ಲಿಗೆ ಹೋಗಿದ್ದೆ. ನಾನು ಡಿನ್ನರ್‌ನಲ್ಲಿ ಕೂಡ ಭಾಗಿಯಾಗಿಲ್ಲ. ನಾನು ಕೇವಲ ಕೆಲವೆ ನಿಮಿಷ ಅಲ್ಲಿದ್ದೆ. ಬಿಜೆಪಿಗೆ ಮುಜುರ ತರುವ ಕೆಲಸ ನಾನು ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಗರದ ಖಾಸಗಿ ಹೊಟೆಲ್‌ನಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಡಿ.ಕೆ.ಶಿವಕುಮಾರ್ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಆಹ್ವಾನ ಮಾಡಿದ್ದರು. ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಹೋಗಿದ್ದರು. ಇದು ರಾಜಕೀಯ ವಲಯದಲ್ಲಿ ಗೊಂದಲ ಸೃಷ್ಟಿ ಮಾಡಿತ್ತು. ಔತಣಕೂಟದಲ್ಲಿ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಪ್ರಮುಖ ಸಚಿವ ಕೂಡ ಭಾಗವಹಿಸಿದ್ದರು. ಸುಧಾಕರ್ ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಯಡಿಯೂರಪ್ಪ ಅವರ ಆಪ್ತನಂತೆ ಗುರುತಿಸಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version