ಲೈಫ್ ಸ್ಟೈಲ್
‘ಗುಲ್ಕನ್’ ಮಹಿಮೆ ಅಪಾರ..!
ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್. ಗುಲ್ಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು.ಇದರಲ್ಲಿ ವಿವಿಧ ಬಗ್ಗೆಯ ಗುಲ್ಕನ್ ಇದೇ.
ಗುಲ್ಕನ್ ಅನ್ನು ಹಲವು ರೀತಿಯಲ್ಲಿ ಬಳಸಬಹುದು
- ಕೆಲವರು ಇದನ್ನು ಬಾಯಿಯ ಅಲ್ಸರ್ ನಿವಾರಿಸಲು ಬಳಸುತ್ತಾರೆ.
- ರಕ್ತ ಶುದ್ಧಿ ಮಾಡಿ, ಚರ್ಮದಲ್ಲಿ ಸುಕ್ಕು, ಮೊಡವೆ ಮತ್ತು ಕಪ್ಪು ಕಲೆಗಳು ಮೂಡದ ಹಾಗೆ ನೋಡಿಕೊಳ್ಳುತ್ತೆ.
- ಆರಿಸಿದ ತಾಜಾ ಗುಲಾಬಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆ ಸೇರಿಸುತ್ತಾರೆ. ಗುಲ್ಕನ್ ತಯಾರಿಕೆಯಲ್ಲಿ ಶುಂಠಿಯನ್ನು ಬಳಸುತ್ತಾರೆ.
- ಇಂತಹ ಗುಲ್ಕನ್ ಅನ್ನು ಪ್ರತಿನಿತ್ಯ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. ಜೊತೆಗೆ ದೇಹವನ್ನು ತಂಪಾಗಿಸುತ್ತದೆ.
- ಇದೊಂದು ಒಳ್ಳೆ ಆಂಟಿಆಕ್ಸಿಡೆಂಟ್. ಹಾಗಾಗಿ ನಮ್ಮ ದೇಹದಲ್ಲಿ ಶಕ್ತಿ ಉತ್ಪತ್ತಿ ಮಾಡೋಕೆ ಸಹಾಯ ಮಾಡುತ್ತದೆ.
- ಗುಲ್ಕನ್ ಶೀತ ಪದಾರ್ಥ, ಆದುದರಿಂದ ಇದು ಕೈಕಾಲು ಉರಿ,ನಿಶ್ಯಕ್ತಿ, ಇತರೆ ನೋವನ್ನು ಕಮ್ಮಿ ಮಾಡುತ್ತೆ.
- ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆನೋವನ್ನು ಶಮನ ಮಾಡುತ್ತದೆ. ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಹೆಚ್ಚು ಉತ್ತಮ.
- ಗುಲ್ಕನ್ ದೇಹದ ರಕ್ತವನ್ನು ಶುದ್ದೀಕರಿಸುತ್ತದೆ. ನಿಶಕ್ತಿಯನ್ನು ದೂರ ಮಾಡುವ ಗುಣ ಹೊಂದಿರುವ ಗುಲ್ಕನ್ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.
- ಬೇಸಿಗೆ ಕಾಲದಲ್ಲಿ ಗುಲ್ಕನ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಉಷ್ಣಾಘಾತ ಮತ್ತು ಮೂಗಿನಲ್ಲಿ ರಕ್ತ ಬರುವುದನ್ನು ತಡೆಗಟ್ಟುತ್ತದೆ.
- ಫೈಬರ್ ಅಂಶ ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರಾಗುತ್ತದೆ.
- ನರಮಂಡಲಾನ ಒಳ್ಳೆಯ ಸ್ಥಿತೀಲಿಟ್ಟು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
- ಮನೆಯಿಂದ ಹೊರಗೆ ಹೋಗುವ ಮುಂಚೆ 2 ಚಮಚ ಗುಲ್ಕನ್ ತಿಂದು ಹೊರಟರೆ ಸನ್ ಸ್ಟ್ರೋಕ್ ಆಗೋದನ್ನೂ ತಪ್ಪಿಸಬಹುದು.
ಒಟ್ಟಿನಲ್ಲಿ ದೇಹವನ್ನು ತಂಪಾಗಿಡುವ ಗುಲ್ಕನ್ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಯೋಗವಾಗಿದೆ.
ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ ಒಣಗಿದ ಗುಲಾಬಿಯ ಪಕಳೆಗಳು 500 ಗ್ರಾಂ ನಟ್ಸ್, ಅಂಜೂರ (ಫಿಗ್), ಒಣಗಿದ ಕರ್ಜೂರ * 500 ಗ್ರಾಂ ಸಕ್ಕರೆ ಮತ್ತು 1/2 ಲೋಟ ನೀರು (100ml)
ತಯಾರಿಸುವ ವಿಧಾನ
- ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಸಕ್ಕರೆ ನೀರು ಗಟ್ಟಿಯಾಗುವರೆಗೆ ಕುದಿಸಬೇಕು.
- ನಂತರ ಈ ಸಕ್ಕರೆ ಪಾನಕವನ್ನು ತಣ್ಣಗಾಗಲು ಬಿಡಬೇಕು. ನಂತರ ಉಳಿದ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ ಮಿಶ್ರ ಮಾಡಬೇಕು.
- ಈ ಗುಲ್ಕನ್ ತುಂಬಾ ಗಟ್ಟಿಯಾಗುವುದನ್ನು ತಡೆಯಲು ಫ್ರಿಜ್‌ನಲ್ಲಿ ಇಡಬಾರದು. ಇದನ್ನು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು.
ಪ್ರತಿದಿನ ಹಾಗೇ ತಿನ್ನಬಹುದು, ದೋಸೆ ,ಚಪಾತಿ,ರೋಟಿ, ಮುಖ್ಯವಾಗಿ ಬ್ರೆಡ್, ಬನ್ ಗಳಿಗೆ ಬೆಣ್ಣೆ ಗುಲ್ಕನ್ ಸೇರಿಸಿ ಜೊತೆ ತಿನ್ನಬಹುದು ಅಥವಾ ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಬಹುದು.
ಸೌಮ್ಯ ಅಶೋಕ್
ಬೆಂಗಳೂರು