ಸಿನಿ ಸುದ್ದಿ

ಸಂಗೀತಗಾರನ ಸಂಗೀತಕ್ಕೆ ತಲೆದೂಗಿದ ‘ನಾದ ಬ್ರಹ್ಮ’ ; ಮಿಸ್ ಮಾಡ್ದೆ ವಿಡಿಯೋ ನೋಡಿ..!

Published

on

ಸುದ್ದಿದಿನ ಡೆಸ್ಕ್ : ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ನಿಶ್ಚಿತಾರ್ಥಅದ್ದೂರಿಯಾಗಿ ನಡೆಯುತ್ತಿತ್ತು. ಒಂದು ಕಡೆ ನಿಶ್ಚಿತಾರ್ಥ ಮತ್ತೊಂದ ಕಡೆಆರ್ಕೆಸ್ಟ್ರಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ. ನಿಶ್ಚಿತಾರ್ಥಕ್ಕೆ ಆಗಮಿಸಿದ್ದನಮ್ಮ ಮಹಾಗುರುಗಳು ವೇದಿಕೆಯಲ್ಲಿ ನವಜೋಡಿಗೆ ಆಶೀರ್ವದಿಸಿದ ನಂತರ ಅವರ ಗಮನ ಅಲ್ಲಿಯೇ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದತ್ತ ಹರಿಯಿತು.

ಅಲ್ಲಿ ಒಬ್ಬ ಸಂಗೀತ ಕಲಾವಿದ ಸ್ಯಾಕ್ಸೋ ಫೋನಲ್ಲಿ ರವಿಚಂದ್ರನ್ ಅವರ ಒಂದು ಪ್ರಸಿದ್ಧ ಹಾಡನ್ನು ನುಡಿಸುತ್ತಿದ್ದರು. ತಮ್ಮದೇ ಸಂಗೀತ ಸಂಯೋಜನೆಯಿದ್ದ ಅಂಜದಗಂಡು ಚಿತ್ರದ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹೂ ಅಂತೀಯ ಉಹೂಂ ಅಂತೀಯ ಸುಶ್ರಾವ್ಯ ಹಾಡಿಗೆ ಸಂಗೀತಗಾರನು ಸಂಗೀತ ನುಡಿಸುತ್ತಿದ್ದರೆ, ಹಂಸಲೇಖ ಅವರು ಆರ್ಕೆಸ್ಟ್ರಾ ನಡೆಯುತ್ತಿದ್ದ ಕಡೆ ಹೋಗಿ, ಆ ಸಂಗೀತ ಕೇಳಿ ಮೈ ಮರೆತು ಕೇಳಿ ನಿಂತುಕೊಂಡರು.

ಪೂರ್ತಿ ಹಾಡನ್ನು ಕೇಳಿದ ನಂತರ ನಾದವನ್ನು ಹೊಮ್ಮಿಸುತ್ತಿದ್ದ ಸಂಗೀತಗಾರನ ಕೆನ್ನೆ ಯನ್ನು ಮುದ್ದಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಖ್ಯಾತ ಸಂಗೀತ ನಿರ್ದೇಶಕನಾದರೂ, ಸರಳ ವ್ಯಕ್ತಿತ್ವದಿಂದ
ಅಲ್ಲಿ ಅವರು ಸಂಗೀತ ನಿನಾದಕ್ಕೆ ತಲೆದೂಗಿದ ಘಟನೆ ನಿಜಕ್ಕೂ ಅವರ್ಣನೀಯವಾಗಿತ್ತು. ಕೆಲವು ವ್ಯಕ್ತಿಗಳು ಕೇವಲ ತಮ್ಮ ಸ್ಥಾನ ಹಾಗೂ ತಮ್ಮ ಹಿರಿಮೆ ಗರಿಮೆಗಳಿಂದ ಜನರ ಮುಂದೆ ದೊಡ್ಡ ವ್ಯಕ್ತಿಗಳಾಗಿ ಕಂಡರೆ, ಇನ್ನೂ ಕೆಲವರು ಅದರ ಜೊತೆಜೊತೆಗೆ ತಮ್ಮ ಸರಳ, ಸಜ್ಜನಿಕೆ ಹಾಗೂ ಸಹೃದಯವಂತಿಕೆಯಿಂದಲೂ ಜನರ ಗಮನವನ್ನು ಸೆಳೆಯುವುದಲ್ಲದೆ, ಅವರನ್ನು ಅಭಿಮಾನಿಸುವ ಜನರು, ಮನಸ್ಸಿನಲ್ಲೇ ಆರಾಧಿಸಲು ಆರಂಭಿಸುತ್ತಾರೆ.

ಅಂತಹ ವ್ಯಕ್ತಿಗಳ ಸಾಲಿನಲ್ಲಿ ಸಂಗೀತ ಲೋಕದಲ್ಲಿ ತನ್ನದೇ ಆದ ಸ್ಥಾನ ಹಾಗೂ ಔನತ್ಯ ಪಡೆದಿರುವ ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಾದ ಮಹಾಗುರುಗಳೆಂದೇ ಕರೆಯಲ್ಪಡುವ ಹಂಸಲೇಖ ಅವರು ಕೂಡ ಒಬ್ಬರು. ಇಂತಹ ಒಂದು ಅಪರೂಪದ ವಿಡಿಯೋವನ್ನು ನಮ್ಮ ನಾದಬ್ರಹ್ಮ ಹಂಸಲೇಖ ಹಂಸಾಭಿಮಾನಿಗಳಿಗಾಗಿ ಹಾಕಿದ್ದೇವೆ ನೋಡಿ ಆನಂದಿಸಿ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version