ದಿನದ ಸುದ್ದಿ

ವಿಶೇಷಚೇತನರ ಸಬಲೀಕರಣ | ವಿವಿಧ ಸಂಸ್ಥೆಗಳೊಂದಿಗೆ 72 ಒಪ್ಪಂದಗಳಿಗೆ ಸಹಿ

Published

on

ಸುದ್ದಿದಿನಡೆಸ್ಕ್:ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ, ವಿಶೇಷ ಚೇತನರ ವ್ಯಕ್ತಿಗಳ ಸಬಲೀಕರಣ ಇಲಾಖೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ವಿಶೇಷ ಚೇತನರನ್ನು ಸಬಲೀಕರಣಗೊಳಿಸಲು ಖಾಸಗಿ ಸಂಸ್ಥೆಗಳು ಹಾಗೂ ನವೋದ್ಯಮಗಳೊಂದಿಗೆ 72 ತಿಳುವಳಿಕೆಯ ಒಪ್ಪಂದಗಳಿಗೆ ಸಹಿ ಹಾಕಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಡಾ. ವೀರೇಂದ್ರ ಕುಮಾರ್ ಹಾಗೂ ರಾಜ್ಯ ಸಚಿವ ಬಿ.ಎಲ್ ವರ್ಮಾ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಸಚಿವ ಡಾ.ವೀರೇಂದ್ರ ಕುಮಾರ್ ಮಾತನಾಡಿ, ವಿಶೇಷ ಚೇತನರ ಬಗ್ಗೆ ಸರ್ಕಾರದ ಬದ್ಧತೆಯನ್ನು ಈ ತಿಳಿವಳಿಕೆ ಒಪ್ಪಂದಗಳು ಪ್ರದರ್ಶಿಸುತ್ತವೆ. ವಿಶೇಷ ಚೇತನರು ಅಪಾರ ಸಾಮರ್ಥ್ಯವನ್ನು ಹೊಂದಿದವರಾಗಿದ್ದು, ಅವರಿಗೆ ಅವಕಾಶಗಳನ್ನು ಮಾತ್ರ ಕಲ್ಪಿಸ ಬೇಕು ಎಂದು ಹೇಳಿದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version