ರಾಜಕೀಯ
ಮೈಸೂರು ದಸರಾ : ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಮಹೋತ್ಸವದಿಂದ ಹೊರಗುಳಿಯಲಿದ್ದಾರೆ ಎಚ್.ಡಿ.ಕೆ..!
ಸುದ್ದಿದಿನ ಡೆಸ್ಕ್ : ಮೈಸೂರಿನ ದಸರಾಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದೆ. ಮಂಡ್ಯ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕು ಮಂಡ್ಯ ಲೋಕಸಭಾ ವ್ಯಾಪ್ತಿಗೆ ಸೇರಿರುವ ಮುಖ್ಯಮಂತ್ರಿ ಸಹಿತ ಎಲ್ಲಾ ಸ್ಥರ ಜನಪ್ರತಿನಿಧಿಗಳು ದಸರಾ ಮಹೋತ್ಸವದಿಂದ ಹೊರಗುಳಿಯುವ ಸಾಧ್ಯತೆಯಿದೆ.
ವಿನಾಯಿತಿ ಕೋರಿ ಚುನಾವಣಾ ಆಯೋಗಕ್ಕೆ ಜಿಲ್ಲಾಡಳಿತದಿಂದ ಮನವಿಮಾಡುವ ಸಾಧ್ಯತೆಯಿದ್ದು, ಆಯೋಗ ಸ್ಪಂದಿಸದಿದ್ದರೆ ಕೇವಲ ಅಧಿಕಾರಿಗಳಿದ ನಡೆಲಿದೆ ದಸರಾ ಹಬ್ಬ. ದಸರಾ ಉದ್ಘಾಟನೆ, ಜಂಬೂಸವಾರಿಯಲ್ಲಿ ಆಡಳಿತಾರೂಢ ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ.ಇಂದು ಸರ್ಕಾರಿ ರಜೆ ಇರುವ ಕಾರಣ ಚುನಾವಣಾ ಆಯೋಗ ನಾಳೆ ತನ್ನ ನಿಲುವು ಸ್ಪಷ್ಟಪಡಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401