ದಿನದ ಸುದ್ದಿ
ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ನಕಲಿ ಫೋಟೋ ಸೃಷ್ಟಿ : ಪತ್ರಕರ್ತನ ಬಂಧನ
ಸುದ್ದಿದಿನ, ಬೆಂಗಳೂರು : ಮುಖ್ಯಂಮತ್ರಿ ಕುಮಾರಸ್ವಾಮಿ ಅವರು ಪಕೃತಿ ಚಿಕಿತ್ಸೆಗೆಂದು ಉಡುಪಿಗೆ ಹೋದ ಸಂದರ್ಭದಲ್ಲಿ ನಟಿ ರಾಧಿಕಾರನ್ನು ಬೇಟಿಯಾಗಿದ್ದರೆಂಬ ಫೋಟೋವನ್ನು ಎಡಿಟ್ (ಕೊಲಾಜ್) ಮಾಡಿ ಸುಳ್ಳು ಸುದ್ದಿ ಪ್ರಕಟಿಸಿದ್ದ ನ್ಯೂಸ್ ವೆಬ್ಸೈಟ್ ಒಂದರ ಪತ್ರಕರ್ತ ಅಜಿತ್ ಶೆಟ್ಟಿ ಸೇರಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಿಎಂ ಕುಮಾರಸ್ವಾಮಿ ಅವರು ಪ್ರಕೃತಿ ಚಿಕಿತ್ ಇಬ್ಬರ ಫೋಟೋವನ್ನು ನಕಲಿ ಮಾಡಿ ಅಜಿತ್ ಶೆಟ್ಟಿ ಎಂಬ ಪತ್ರಕರ್ತ ಸುದ್ದಿ ಮಾಡಿದ್ದ ಎಂದು ಆರೋಪಿಸಲಾಗಿದೆ. ಇಬ್ಬರು ಜತೆಯಲ್ಲಿ ನಿಂತಿರುವ ಹಾಗೇ ಏ. 24 ರಂದು ಆರೋಪಿಗಳು ಫೋಟೊ ಕೊಲಾಜ್ ಮಾಡಿ ಸುದ್ದಿ ಮಾಡಿದ್ದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಟಿ ರಾಧಿಕಾ ಅವರು ಜೊತೆಗೆ ನಿಂತಿರುವ ಹಾಗೆ ನಕಲಿ ಫೋಟೋವನ್ನು ಇವರು ಸೃಷ್ಟಿಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಾದ ದಿನೇಶ್ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243