ರಾಜಕೀಯ
ಎಚ್.ಡಿ.ಕೆ ರಾಜ್ಯದ ರೈತರ ಸಂಕಷ್ಟಗಳಿಗೆ ಪರಿಹಾರ ನೀಡಲಿ | ಯಡಿಯೂರಪ್ಪ
ಸುದ್ದಿದಿನ ಡೆಸ್ಕ್ | ಮುಖ್ಯಮಂತ್ರಿ ಆದವರು ರಾಜ್ಯದ ರೈತರ ಸಂಕಷ್ಟಗಳಿಗೆ ಪರಿಹಾರ ಒದಗಿಸಬೇಕು. ಜಿಲ್ಲಾ ಉಸ್ತುವಾರಿ ನೇಮಕ ಮಾಡುವಲ್ಲಿ ಕಾಲಹರಣ ಮಾಡುತ್ತಿದೆ. ಇಂಥ ಸಮಸ್ಯೆಗಳನ್ನು ಬಯಲಿಗೆ ತರಲು ನಾನು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳ್ಳಾರಿಯಲ್ಲಿ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಶೇ. 33 ಮಳೆ ಕೊರತೆ ಆಗಿದೆ. ಜನ- ಜಾನುವಾರುಗಳಿಗೆ ನೀರಿಲ್ಲ. ಸಕಾಲದಲ್ಲಿ ಮಳೆ ಆಗಿಲ್ಲ. ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಆಡಳಿತ ಸ್ಥಗಿತ ಗೊಂಡಿದೆ. ಹೀಗಾಗಿ ಈ ಸಮಸ್ಯೆ ಬಹಿರಂಗ ಪಡಿಸಲು ನಾನು ಬಂದಿದ್ದೇನೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಲಿದೆ. ಮೋದಿ ಕಾರ್ಯವನ್ನು ಜಗತ್ತು ಮೆಚ್ಚಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401