ಲೈಫ್ ಸ್ಟೈಲ್
ಮಹಿಳೆಯರಲ್ಲಿ ಹೃದಯಾಘಾತ..!
ಅಧುನಿಕ ಸಮಾಜದಲ್ಲಿ ಮಹಿಳೆಯರು ಪುರುಷರಿಗಿಂತ ಹತ್ತು ವರ್ಷ (ವಯಸ್ಸಿನಲ್ಲಿ) ಹೆಚ್ಚು ಕಾಲ ಬದುಕುತ್ತಿದ್ದಾರೆ. ಆದರೆ ವಯಸ್ಸು ಮುಂದುವರಿದಂತೆಲ್ಲಾ ಹೃದಯಾಘಾತಗಳು ಸ್ತ್ರೀ ಪುರುಷರಿಬ್ಬರಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದಾದರೂ, ಮಹಿಳೆಯರಲ್ಲಿ ಪುರುಷರಿಗಿಂತ 10 ವರ್ಷಗಳ ವಯಸ್ಸಿನ ನಂತರ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವುವು. ಇದಕ್ಕೆ ಕಾರಣ ಮಹಿಳೆಯರಲ್ಲಿನ ಸ್ತ್ರೀ ಹಾರ್ಮೋನುಗಳು ಹೃದಯಾಘಾತಗಳು ಉಂಟಾಗದಂತೆ ಮಾಡುವವು. ಮಹಿಳೆಯರು ಮಧುಮೇಹ ರೋಗ ಮತ್ತು ಮುಟ್ಟು ನಿಲ್ಲುವಿಕೆಯಂತಹ ನೈಸರ್ಗಿಕ ಕಾರಣಗಳಿಂದಲೂ, ಈ ಪ್ರಕೃತಿ ದತ್ತವಾದ ರಕ್ಷಣೆಯನ್ನು ಕಳೆದುಲಲಕೊಳ್ಳುವರು.
ಮಹಿಳೆಯರಲ್ಲಿಯೂ ಉದರ ಭಾಗದಲ್ಲಿ ಕೊಬ್ಬಿನ ಶೇಕರಣೆಯು ಹೃದಯಾಘಾತಗಳಿಗೆ ಮುಖ್ಯ ಕಾರಣವಾಗುವುದು 18 ರಿಂದ 20 ವರ್ಷವಯಸ್ಸು ದಾಟಿದ ಮಹಿಳೆಯರಲ್ಲಿ ದೇಹದ ತೂಕವು 7 ರಿಂದ 11 ರಷ್ಟು ಕಿಲೋಗ್ರಾಂ ಹೆಚ್ಚಿದಲ್ಲಿ ಅವರ ಮಧ್ಯವಯಸ್ಸಿನಲ್ಲಿ ಹೃದಯಾಘಾತಗಳು ಸಂಭವಿಸುವುದು ಅಂಜಿಕೆ ಸ್ವಭಾವದ ಖಿನ್ನ ಮಾನಸಿಕ ರೋಗದ ಮಹಿಳೆಯರಲ್ಲಿ ಮತ್ತು ಸಾಮಾಜಿಕ ಬೆಂಬಲ ದೊರಕದಿರುವ ಮಹಿಳೆಯರಲ್ಲಿ ಹೃದಯಾಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದು ಎಂದು ಇನ್ನೊಂದು ಅಧ್ಯಯನದಿಂದ ತಿಳಿದಿಬಂದದೆ.
45 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ರಕ್ತದೊತ್ತಡವು ಪುರುಷರಿಗಿಂತ ಹೆಚ್ಚು ತ್ವರಿತವಾಗಿ ಮೇಲಕ್ಕೇರುವುದು. ಅಧಿಕ ರಕ್ತದೊತ್ತಡವು ಪುರುಷರಲ್ಲಿ ಹೃದಯಾಘಾತಗಳನ್ನು 3 ಪಾಲು ಹೆಚ್ಚಿಸುವುದಾದರೆ ಮಹಿಳೆಯರಲ್ಲಿ 4 ಪಾಲು ಹೆಚ್ಚಿಸುವುದು, ಮಧುಮೇಹ ರೋಗವು ಪುರುಷರಲ್ಲಿ ಹೃದಯಾಘಾತಗಳನ್ನು 2 ರಿಂದ 3 ರಷ್ಟು ಹೆಚ್ಚಿಸುವುದಾದರೆ ಮಹಿಳೆಯರಲ್ಲಿ 3 ರಿಂದ 7ರಷ್ಟು ಹೃದಯಾಘಾತಗಳು ಮರುಕಳಿಸುವ ಸಂಭವಗಳೂ ಹೆಚ್ಚಾಗಿರುವುದು. 45 ವರ್ಷಗಳಿಗೂ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ರಕ್ತದ ಕೊಲೆಸ್ಟ್ರಾಲ್ ಕೊಬ್ಬಿನ ಮಟ್ಟವು ಅದೇ ವಯಸ್ಸಿನ ಪುರುಷರಿಗಿಂತ ಶೇಕಡ 10 ಮಿ.ಗ್ರಾಂ.ನಷ್ಟು ಕಡಿಮೆಯಾಗಿಯೂ, 65 ವರ್ಷ ವಯಸ್ಸಿನ ನಂತರ ಶೇಕಡ 10 ಮಿ.ಗ್ರಾಂ.ನಷ್ಟು ಹೆಚ್ಚಾಗಿಯೂ ಇರುವುದಾಗಿ ಕಂಡುಬಂದಿದೆ.
ರಕ್ತದಲ್ಲಿ ಹೆಚ್ಚಿನ ಮಟ್ಟದ ಎಲ್ ಡಿಎಲ್ ಕೊಲೆಸ್ಟ್ರಾಲ್ ಹೃದಯಾಘಾತಕ್ಕೊಂದು ಮುಖ್ಯ ಕಾರಣ. ಮಹಿಳೆಯರಲ್ಲಿ 40 ವರ್ಷ ವಯಸ್ಸಿನ ನಂತರ ಪ್ರತಿ ವರ್ಷವೊಂದರಲ್ಲಿ ಎಲ್ ಡಿಎಲ್ ಕೊಲೆಸ್ಟರಾಲ್ ಶೇಕಡ 2 ಮಿ.ಗ್ರಾಂ. ನಂತೆ 60 ವರ್ಷ ವಯಸ್ಸಿನವರೆಗೂ ಮೇಲೇರುವುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಮುನ್ನ ಎಚ್ ಡಿಎಲ್ ಕೊಲೆಸ್ಟ್ರಾಲ್ (ಉತ್ತಮ ಕೊಲೆಸ್ಟ್ರಾಲ್) ಮಟ್ಟವು ಪುರುಷರಿಗಿಂತ 10ಮಿ.ಗ್ರಾಂ. ಹೆಚ್ಚಾಗಿರುವುದು. ರಕ್ತದ ಎಚ್ ಡಿಎಲ್ ಮಟ್ಟವು ಒಂದು ಜನಾಂಗದಿಂದ ಇನ್ನೊಂದು ಜನಾಂಗದಲ್ಲಿ ಬಹಳಷ್ಟು ಭಿನ್ನವಾಗಿರುವುದು. ಭಾರತದೇಶದ ಬುಡಕಟ್ಟಿನ ಮಹಿಳೆಯರಲ್ಲಿ ಎಚ್ ಡಿಎಲ್ ಮಟ್ಟವು ಚೀನಾ ಮತ್ತು ಜಪಾನ್ ದೇಶದ ಜನರಿಗಿಂತ ಕಡಿಮೆ ಮಟ್ಟದಲ್ಲಿರುವುದು.
ಭಾರತೀಯ ಮಹಿಳೆಯರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಹೃದಯಾಘಾತಗಳಿಗೆ ಇದೂ ಒಂದು ಕಾರಣವೆಂದು ಹೇಳಲಾಗಿದೆ. ರಕ್ತದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವು ಹೃದಯಾಘಾತಗಳಿಗೆ ಕಾರಣವಾಗುವುದಾದರೂ ಕೊಲೆಸ್ಟ್ರಾಲ್ ಮತ್ತು ಎಚ್ ಡಿಎಲ್ ಅನುಪಾತದ ಸೂಚ್ಯಂಕವು ಹೆಚ್ಚು ಅರ್ಥಗರ್ಭಿತವಾದುದು. ಈ ಸೂಚ್ಯಂಕ ಸಂಖ್ಯೆಗೆ ಅನುಗುಣವಾಗಿ (ಹೆಚ್ಚಿದಂತೆ) ಹೃದಯಾಘಾತಗಳು ಮೇಲೇರುವುವು. ಭಾರತ ದೇಶದ ಮಹಿಳೆಯರಲ್ಲಿ ರಕ್ತದಲ್ಲಿ ಎಚ್ ಡಿಎಲ್ ಮಟ್ಟವು ಕಡಿಮೆಯಾಗಿರುವುದರಿಂದ ಈ ಅನುಪಾತದ ಸೂಚ್ಯಂಕವು ಹೆಚ್ಚಿರುವುದು. ಸಾಮಾನ್ಯವಾಗಿರಬೇಕಾದ ಕೊಲೆಸ್ಟ್ರಾಲ್ ಎಚ್ ಡಿಎಲ್ ಅನುಪಾತದ ಸೂಚ್ಯಂಕ 4. ಈ ಸಂಖ್ಯೆಗೂ ಕಡಿಮೆಯಿರುವುದು ಉತ್ತಮ.
ಮಹಿಳೆಯರಲ್ಲಿ ಹೃದಯಾಘಾತಗಳಿಗೆ ದೇಹದಲ್ಲಿನ ಲೈಪೊಪ್ರೋಟೀನ್-ಎ ಒಂದು ಮುಖ್ಯ ಕಾರಣವಾಗಿರುವುದು. ಸ್ತ್ರೀ ಹಾರ್ಮೋನ್ ಗಳು ದೇಹದಲ್ಲಿನ ಲೈಪೊಪ್ರೋಟೀನ್-ಎ ಮಟ್ಟವನ್ನು ತಗ್ಗಿಸುವುವು. ಮುಟ್ಟು ನಿಂತ ನಂತರ ದೇಹದಲ್ಲಿ ಲೈಪೊಪ್ರೋಟೀನ್-ಎ ಶೇಕಡ 10 ರಷ್ಟು ಹೆಚ್ಚುವುದು. ದೇಹದಲ್ಲಿ ಮೇಲಕ್ಕೇರಿದ ಹೋಮೊಸಿಸ್ಟೀನ್ ಹೃದಯಾಘಾತಗಳಿಗೆ ಕಾರಣವಾಗುವುದು. ಇದರ ಜೊತೆಗೆ ಲೈಪೊಪ್ರೋಟೀನ್-ಎ ಅಂಶವೂ ಜಾಸ್ತಿಯಾಗಿದ್ದಲ್ಲಿ ಹೃದಯಾಘಾತಗಳು ಅನೇಕ ಪುಟ್ಟು ಹೆಚ್ಚುವುವು.
ಮಹಿಳೆಯರಲ್ಲಿ ಹೃದಯಬೇನೆ ಮತ್ತು ಹೃದಯಾಘಾತಗಳಿಗೆ ಅಧಿಕ ರಕ್ತದೊತ್ತಡ, ಮಧುಮೇಹ ರೋಗ, ರಕ್ತದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್, ಕುಗ್ಗಿದ ಎಚ್ ಡಿಎಲ್ ಮಟ್ಟಗಳು ಮತ್ತು ಲೈಪೊಪ್ರೋಟೀನ್-ಎ ಕಾರಣವಾಗಿರುವುದಾದರೂ, ಭಾರತ ದೇಶದ ಮಹಿಳೆಯರಲ್ಲಿ ಪಾಶ್ಚಿಮಾತ್ಯ ದೇಶದ ಮಹಿಳೆಯರಿಗಿಂತ ಅಧಿಕ ರಕ್ತದೊತ್ತಡ, ರಕ್ತದಲ್ಲಿ ಹೆಚ್ಚದ ಕೊಲೆಸ್ಟ್ರಾಲ್ ಕೊಬ್ಬು ಅವರಲ್ಲಿ ಧೂಮಪಾನ ಚಟ ಇಲ್ಲದಿದ್ದರೂ, ಮಧುಮೇಹ ರೋಗ, ಬೊಜ್ಜುದೇಹ,ರಕ್ತದಲ್ಲಿ ಹೆಚ್ಚಿದ ಟ್ರೈಗ್ಲಿಸರೈಡ್ ಮಟ್ಟ ಮತ್ತು ತಗ್ಗಿದ ಎಚ್ ಡಿಎಲ್ ಮಟ್ಟ ಭಾರತ ದೇಶದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವುವು. ಹೀಗಾಗಿ ಭಾರತೀಯರಾಗಿರುವುದೇ (ಅನುವಂಶೀಯತೆ) ಹೃದಯಾಘಾತಗಳಿಗೆ ಒಂದು ಮುಖ್ಯ ಕಾರಣ ಎಂದು ಹೇಳಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243