ದಿನದ ಸುದ್ದಿ
ಹೊನ್ನಾಳಿ ಪ್ರಥಮದರ್ಜೆ ಕಾಲೇಜಿನಲ್ಲಿ ಏಕಾಗ್ರತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ
ಸುದ್ದಿದಿನ, ಹೊನ್ನಾಳಿ: ಏಕಾಗ್ರತೆ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಡಿಸಿಕೋಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯ ಆಂದ್ರ ಪ್ರದೇಶದ ಗುರುನಾಥ ಹೆಗಡೆ ರವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಯುವ ರೆಡ್ ಕ್ರಾಸ್ ಘಟಕ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1ಮತ್ತು 2 ಸಹಯೋಗದಲ್ಲಿ ಏಕಾಗ್ರತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದಿನ ದಿನ ಮಾನದಲ್ಲಿ ನಾವುಗಳು ಹೇಗೆ ಬದುಕಬೇಕು, ನಮ್ಮ ಮನಃಸ್ಥಿತಿ ಹೇಗೆ ವರ್ತಿಸುತ್ತದೆ, ನಮ್ಮ ದೇಹದ ಭಾಗಗಳು ಹೇಗೆ ವರ್ತಿಸುತ್ತವೆ ಮತ್ತು ನಮ್ಮ ಭೌತಿಕ ಪ್ರಪಂಚದಲ್ಲಿ ಹೇಗೆ ನಾವು ಬದುಕಬೇಕು, ವಿದ್ಯಾರ್ಥಿಗಳು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಶಾಂತಿ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಜೀವವು ಅಮೂಲ್ಯವಾದುದು. ಮನುಷ್ಯತ್ವದ ನೆಲೆಯಲ್ಲಿ ಸಕಲ ಜೀವಿಗಳನ್ನು ಕಾಣಬೇಕು. ಮಾನವಿಯತೆಯ ಗುಣಗಳನ್ನು ಮೈಗೂಡಿಸಿಕೊಂಡು ಹಿರಿಯರಿಗೆ ಮತ್ತು ತಂದೆ-ತಾಯಿಗಳಿಗೆ ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಧನಂಜಯ. ಬಿ. ಜಿ. ವಹಿಸಿ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಸಾಮಾನ್ಯ ಶಿಕ್ಷಣ ಮತ್ತು ನೈತಿಕ ಶಿಕ್ಷಣ ಎರಡನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬೇಕು. ನಾವು ಅಧ್ಯಯನ ಮಾಡುವ ಶಿಕ್ಷಣ ಪ್ರಕ್ರೀಯೇಗೆ ನೈತಿಕ ಸ್ಪರ್ಷ ಇದ್ದಾಗ ಶಿಕ್ಷಣಕ್ಕೆ ತಾತ್ವಿಕ ಮಹತ್ವ ಬರುತ್ತದೆ. ಶಿಕ್ಷಣ ಎಂದರೆ ಉದ್ಯೋಗವನ್ನು ಪಡೆಯುವ ಸಾಧನ ಹಾಗೂ ಜೊತೆ ಜೊತೆಗೆ ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುತ್ತದೆ ಎಂದು ಹೇಳಿದರು.
ಜಗತ್ತಿನ ಎಲ್ಲ ಸಮಸ್ಯೆಗಳಿಗೆ ನೈತಿಕ ಶಿಕ್ಷಣ ಮಾತ್ರ ಪರಿಹಾರ ನೀಡಬಲ್ಲದು. ಆದುರಿಂದ ಜ್ಞಾನದ ಎಲ್ಲ ಶಾಖೆಗಳಲ್ಲೂ ನೈತಿಕತೆಗೆ ಒತ್ತು ಕೊಡಬೇಕು. ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಬಾರದು ಹಾಗೂ ನೈತಿಕ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ. ಪ್ರತಿಯೊಬ್ಬರಿಗೂ ನೈತಿಕ ಶಿಕ್ಷಣ ನೀಡಿದರೆ ಸಮಾಜಬಾಹಿರ ಕೃತ್ಯಗಳು ಹಂತ ಹಂತವಾಗಿ ಕಡಿಮೆ ಆಗುತ್ತದೆ ಎಂದು ಹೇಳಿದರು.
ನಿರೂಪಣೆಯನ್ನು ಪ್ರೊ. ಬೆಳ್ಳುಳ್ಳಿ ಕೊಟ್ರೇಶ, ಸಹಾಯಕ ಪ್ರಾಧ್ಯಾಪಕರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ. ಹರೀಶ ಪಿ.ಎಸ್, ದೈಹಿಕ ಶಿಕ್ಷಣ ನಿರ್ದೇಶಕರು ನಿರ್ವಹಿಸಿದರು. ವಂದನಾರ್ಪಣೆಯನ್ನು ಗ್ರಂಥಪಾಲಕರು ಮತ್ತು ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ. ನಾಗರಾಜ ನಾಯ್ಕ ಎಂ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಬಸರಾಜು, ಸದಸ್ಯರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243