ಸಿನಿ ಸುದ್ದಿ
ಹುಚ್ಚಾ ವೆಂಕಟ್ ರಂಪಾಟ ; ಓದಿ ಈ ಸುದ್ದಿ..!
ಸುದ್ದಿದಿನ, ಬೆಂಗಳೂರು : ಹುಚ್ಚ ವೆಂಕಟ್ ರಂಪಾಟ ಹಿನ್ನಲೆ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಪ್ರತ್ಯೇಕ್ಷವಾದ್ದಾನೆ ಹುಚ್ಚ ವೆಂಕಟ್. ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿರುವ ವೆಂಕಟ್. ಹೀಗಾಗಿ ಕಮೀಷನರ್ ಗೆ ದೂರು ನೀಡಲು ಬಂದಿರುವುದಾಗಿ ಹೇಳುತ್ತಿದ್ದಾನೆ.
ಹುಚ್ಚಾ ವೆಂಕಟ್ ರಂಪಾಟ
ಇತ್ತೀಚಿಗೆ ನಡು ರಸ್ತೆಯಲ್ಲಿ ಕುಡಿದು.. ತೂರಾಡಿದ ಹುಚ್ಚಾ ವೆಂಕಟ್ ನ ರಂಪಾಟವನ್ನು ನೋಡಲು ಮುಗಿಬಿದ್ದಿದ್ದರು ಸ್ಥಳೀಯರು. ಬೆಂಗಳೂರಿನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಕುಡಿದು ರಂಪಾಟ ಮಾಡಿದ್ದ. ಅಂದು ಮಟ..ಮಟ..ಮಧ್ಯಾಹ್ನ ಕಂಠ ಪೂರ್ತಿ ಕುಡಿದು ಓಡಾಡಿದ್ದ ನಟ ಹುಚ್ಚ ವೆಂಕಟ್. ನಂತರ ಉಲ್ಲಾಳದ ಬಾರ್ ವೊಂದಲ್ಲಿ ಕುಡಿದು ಹೊರ ಬರುತ್ತಿದ್ದಂತೆ ಬೇಕರಿ ಸಿಬ್ಬಂಧಿ ಜೊತೆ ಗಲಾಟೆ ನಡೆಸಿ ಹಲ್ಲೆ ಮಾಡಿದ್ದ. ಹುಚ್ಚ ವೆಂಕಟ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು ಅಲ್ಲಿನ ಯುವಕರು.
ಈ ಸಂಬಂಧ ಬಳಿಕ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ಎನ್ ಸಿ ಆರ್ ದಾಖಲಿಸಿದ್ದರು. ಬಳಿಕ ಎಚ್ಚರಿಕೆ ಕೊಟ್ಟು ವೆಂಕಟ್ ನನ್ನು ಬಿಟ್ಟು ಕಳಿಸಿದ್ದರು ಪೊಲೀಸರು. ಆದರೆ, ಈಗ ಕಮೀಷನರ್ ಕಚೇರಿಗೆ ದೂರು ನೀಡಲು ಬಂದಿರುವುದಾಗಿ ಹೇಳುತ್ತಿದ್ದಾನೆ ವೆಂಕಟ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401