ಲೈಫ್ ಸ್ಟೈಲ್

ಪಕ್ಷಿ ಪರಿಚಯ | ನವರಂಗ

Published

on

ಫೋಟೋ : ಭಗವತಿ ಎಂ.ಆರ್
  • ಭಗವತಿ ಎಂ.ಆರ್

ಳದಿ, ನೀಲಿ, ಹಸಿರು, ಕೆಂಪು, ಬಿಳಿ ಮತ್ತು ಕಪ್ಪು ಒಂಬತ್ತು ಬಣ್ಣಗಳನ್ನು ಮೆತ್ತಿಕೊಂಡ ಸುಂದರವಾದ ಹಕ್ಕಿ ನವರಂಗ (Indian Pitta). ಸಂಕೋಚದ ಸ್ವಭಾವದ ಈ ಹಕ್ಕಿ ಬಹುಪಾಲು ಪೊದೆಗಳಲ್ಲಿ, ದಟ್ಟ ಮರಗಳಿರುವ ಕಡೆ ಬಹುಪಾಲು ಒಂಟಿಯಾಗಿಯೇ ಇರುತ್ತವೆ.

ಮೂಲತಃ ಹಿಮಾಲಯ ವಾಸಿಯಾದ ಇದು ಚಳಿಗಾಲದಲ್ಲಿ ಭಾರತದ ಇತರೆಡೆಗಳಿಗೆ ಮತ್ತು ಶ್ರೀಲಂಕಾಗೆ ವಲಸೆ ಹೋಗುತ್ತವೆ. ಮುಂಗಾರು ಮಳೆಯ ಚಲನೆಯನ್ನಾಧರಿಸಿ ಇವು ವಲಸೆ ಬರುತ್ತವೆ ಎನ್ನಲಾಗಿದೆ. ಹಿಮಾಲಯದ ಕಾಡುಗಳಲ್ಲಿ ಮರಿ ಮಾಡುತ್ತವೆ. ನೆಲ ಕೆದಕುತ್ತಾ, ತರಗೆಲೆಗಳನ್ನು ಎತ್ತಿ ಹಾಕುತ್ತಾ ಹುಳು ಹಿಡಿದು ತಿನ್ನುತ್ತವೆ.

ನೀಲಿ ಬಣ್ಣದ ಮೋಟು ಬಾಲವನ್ನು ಲಯಬದ್ದವಾಗಿ ಎತ್ತಿ ಕುಣಿಸುತ್ತವೆ. ಇವು ಕೊಂಬೆಯ ಮೇಲೆ ಹತ್ತಿ ಕುಳಿತುಕೊಳ್ಳುವುದು ಅಪರೂಪ. ಆದರೆ, ಮರಿ ಮಾಡುವ ಕಾಲದಲ್ಲಿ ಎತ್ತರದ ಮರದ ಮೇಲೆ ಬಟ್ಟಲು ಗೂಡು ಮಾಡುತ್ತವೆ. ನೆಲದ ಮೇಲೆ ಕುಪ್ಪಳಿಸಿ ಓಡಾಡುವುದರಿಂದ ಇದನ್ನು ಸ್ಥಳೀಯವಾಗಿ ‘ನೆಲಗುಪ್ಪ’ ಅಂತಲೂ ಕರೆಯುತ್ತಾರೆ.

ನವರಂಗ ಹಕ್ಕಿಗಳಿಗೆ ಮಾವಿನ ಹಣ್ಣು ಪ್ರಿಯವಾದ ಆಹಾರವಂತೆ. ನೋಡಲು ಕಳಿತ ಮಾವಿನ ಹಣ್ಣಿನ ಹೋಳಿನಂತೆ ಕಾಣುವ ಇವುಗಳ ಹೊಟ್ಟೆಯ ಭಾಗ ಅರಿಶಿನದ ಬಣ್ಣ. ಕಣ್ಣಿಗೆ ದಟ್ಟ ಕಾಡಿಗೆ ಬಳಿದಂಥ ಕಪ್ಪು, ಕುತ್ತಿಗೆಯವರೆಗೆ ತೆಳುವಾಗಿ ಹರಡಿರುತ್ತದೆ. ಗಾಬರಿಯಾದಾಗ ಕ್ರೀಚ್ ಸ್ವರ ಹೊರಡಿಸುತ್ತವೆ. ಫೋಟೋಗ್ರಾಫರುಗಳಿಗೆ, ಪಕ್ಷಿ ವೀಕ್ಷಕಕರಿಗೆ ಪ್ರಿಯವಾದ ಮತ್ತು ಅಪರೂಪಕ್ಕೆ ಕಾಣ ಸಿಗುವ ಈ ಹಕ್ಕಿ ನಿಮಗೂ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version