ದಿನದ ಸುದ್ದಿ
ಎಟಿಎಂ ನೀಡಿದ್ದ ಪೋಸ್ಟಾಫೀಸಲ್ಲಿ ಇನ್ನು ಇನ್ಶುರೆನ್ಸ್ ಲಭ್ಯ
ಸುದ್ದಿದಿನ ಡೆಸ್ಕ್ : ಭಾರತೀಯ ಪೋಸ್ಟ್ ಆತ್ಯಾಧುನಿಕವಾಗುತ್ತಿದ್ದು, ಹೊಸ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದೆ. ಮೊದಲು ಎಟಿಎಂ ಕಾರ್ಡ್ ನೀಡಿದ್ದ ಪೋಸ್ಟ್ ಈಗ ಇನ್ಶುರೆನ್ಸ್ ಸೌಲಭ್ಯ ಸಿಗಲಿದೆ.
ಪತ್ರ ಸಂದೇಶ ರವಾನಿಸುವ ಉದ್ದೇಶದಿಂದ ಆರಂಭವಾದ ಅಂಚೆ ಇಲಾಖೆ ಕಾಲ ಬದಲಾದಂತೆ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಮೊದಲಿಗೆ ಎಟಿಎಂ ಸೌಲಭ್ಯ ಕೊಟ್ಟ ಪೋಸ್ಟಾಫೀಸ್ ಈಗ ಲೈಫ್ ಇನ್ಶುರೆನ್ಸ್ ಪರಿಚಯಿಸಲು ಉದ್ದೇಶಿಸಿದೆ. ಈಗಾಗಲೇ ಇನ್ಸುರೆನ್ಸ್ ಕ್ಷೇತ್ರದ ದಿಗ್ಗಜ ಎಲ್ಐಸಿ (LIC)ಗಿಂತ ಕಡಿಮೆ ಪ್ರೀಮಿಯಂ ನ ಎರಡು ಉತ್ತಮ ಇನ್ಸುರೆನ್ಸ್ ಬಿಡುಗಡೆ ಮಾಡಿದೆ.
ಪೋಸ್ಟಲ್ ಲೈಫ್ ಇನ್ಸುರೆನ್ಸ್ (PLI) ಮತ್ತು ರೂರಲ್ ಪೋಸ್ಟಲ್ ಲೈಫ್ ಇನ್ಸುರೆನ್ಸ್ (RPLI) ಸರ್ಕಾರಿ ನೌಕರಿಗೆ ಮಾತ್ರ ಈ ಎರಡು ಇನ್ಸುರೆನ್ಸ್ ಗಳು ಲಭ್ಯವಿದ್ದವು. ಈ ಇನ್ಸುರೆನ್ಸ್ ಗಳನ್ನು ಡಾಕ್ಟರ್, ಇಂಜಿನಿಯರ್, ಚಾರ್ಟರ್ಡ್ ಅಕೌಂಟೆಂಟ್, ಲಾಯರ್, ಬ್ಯಾಂಕರ್ ಗಳು ಮತ್ತಿತರ ಲಿಸ್ಟೆಡ್ ಕಂಪನಿ ನೌಕರರಿಗೆ ಸೌಲಭ್ಯ ಸಿಗಲಿದೆ. ಸಂಪೂರ್ಣ ಬಿಮಾ ಗ್ರಾಮ್ ಯೋಜನೆ ಅಡಿ ಈ ಎರಡು ಯೋಜನೆಗಳು 2019ರ ಮಾರ್ಚ್‌ನಿಂದ ವಿಸ್ತರಣೆಗೊಳ್ಳಲಿದೆ.