ಲೈಫ್ ಸ್ಟೈಲ್
ಪಕ್ಷಿಪರಿಚಯ | ನೀಲಕಂಠ
- ಭಗವತಿ ಎಂ.ಆರ್
ನಮ್ಮ ರಾಜ್ಯದ ಸುಂದರ ಪಕ್ಷಿಗಳಲ್ಲಿ ಆಕರ್ಷಕವಾದುದು. ಆದರೂ ಕೋಗಿಲೆ, ಪಾರಿವಾಳ ಮುಂತಾದ ಪಕ್ಷಿಗಳಷ್ಟು ಚಿರಪರಿಚಿತ ಅಲ್ಲದಿದ್ದರೂ ಪಕ್ಷಿ ಪ್ರಿಯರ ಕುತೂಹಲಕ್ಕೆ ಕಾರಣ ಆಗಿರುವುದು ನೀಲಕಂಠ. ಮೈ ಪೂರ ನೀಲಿಯ ಬಣ್ಣವಿರುವ ಈ ಪಕ್ಷಿ ಕರ್ನಾಟಕದ ರಾಜ್ಯಪಕ್ಷಿ.
ಇದರ ನೆತ್ತಿ, ರೆಕ್ಕೆ ತಿಳಿ ನೀಲಿ ಮತ್ತು ಕತ್ತಿನ ಭಾಗ ತಿಳಿಕಂದು ಬಣ್ಣವಿದ್ದು, ಬಿಳಿಯ ಗೀರುಗಳು ಎದ್ದು ಕಾಣುತ್ತದೆ. ಹಾರುವಾಗ ಇದರ ರೆಕ್ಕೆಯ ನೀಲಿ ಬಣ್ಣ ಎದ್ದು ಕಾಣುವುದು. ದಾಸ ಮಗರೆ, ನೀಲಕಾಂತಿ, ಉರುಳಿಗ ಅನ್ನುವ ಹೆಸರು ಕೂಡ ಇದಕ್ಕಿದೆ.
ಇವು ರಸ್ತೆ ಬದಿಯ ಎತ್ತರದ ತಂತಿಗಳ ಮೇಲೆ, ಹೊಲಗಳಿರುವ ಕಡೆ ಒಬ್ಬಂಟಿಯಾಗಿ ಆಹಾರಕ್ಕಾಗಿ ಕಾದು ಕುಳಿತಿರುವ ದೃಶ್ಯ ಸಾಮಾನ್ಯ. ಕೀಟಗಳನ್ನು ಹಿಡಿದು ತಿನ್ನುವುದರಿಂದ ಮನುಷ್ಯನಿಗೆ ಉಪಕಾರಿಯೂ ಆಗಿವೆ. ಇವು ಆಹಾರ ಸಿಕ್ಕಾಗ ಅವುಗಳ ಮೇಲೆ ರಪ್ಪನೆ ಎಗರುವುದಿಲ್ಲ, ನಿಧಾನವಾಗಿ ರೆಕ್ಕೆ ಬಡಿಯುತ್ತಾ ಹಾರುತ್ತವೆ.
ಈ ಪಕ್ಷಿಯು ನೋಡಲು ಸುಂದರವಾಗಿದ್ದರು ಕೂಗು ಕೀರಲು ಧ್ವನಿ ಅದರ ಬಣ್ಣಕ್ಕೂ ಕೂಗಿಗೂ ತಾಳೆಯಾಗುವುದಿಲ್ಲ. ’ನೀಲಕಂಠ’ ಎಂಬುದು ಶಿವನ ಅನೇಕ ಹೆಸರುಗಳಲ್ಲಿ ಒಂದು. ಶಿವನಿಗೆ ನೀಲಕಂಠ ಎಂಬ ಹೆಸರು ಬರಲು ಕಾರಣವಾದ ಪ್ರಸಂಗ ಜನಜನಿತ. ಇದರ ಕಂಠ ನೀಲಿಯ ಲ್ಲವಾದರೂ, ಆ ಹೆಸರು ಅದರ ಮೈಯ ಬಣ್ಣದಿಂದ ಬಂದಂತೆ ತೋರುತ್ತದೆ. ಹಾಗೆ ಸೌಂದರ್ಯದ ಅಧಿಪತಿ ವಿಷ್ಣುವಿಗೂ ಪ್ರಿಯವಾದ ಪಕ್ಷಿ ಎಂಬ ನಂಬಿಕೆ ಕೂಡ ನಮ್ಮಲ್ಲಿ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243