ದಿನದ ಸುದ್ದಿ
ರಾಷ್ಟ್ರಲಾಂಛನ ಸ್ವರೂಪ ಬದಲು: ಮೋದಿ ವಿರುದ್ಧ ನೆಟ್ಟಿಗರ ಕಿಡಿ
ಸುದ್ದಿದಿನ,ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅನಾವರಣಗೊಳಿಸಿದ ನಾಲ್ಕು ಸಿಂಹಗಳ ಮುಖಗಳುಳ್ಳ ಅಶೋಕಸ್ತಂಭ ಸ್ವರೂಪ ಬದಲಿ ಮಾಡಿದ್ದಕ್ಕೆ ಮೋದಿ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಈ ಮೊದಲು ದೇಶದ ರಾಷ್ಟ್ರೀಯ ಲಾಂಛನದ ಸ್ವರೂಪ ಹಿತಭಾವ, ಘನತೆಯಿಂದ ಕೂಡಿತ್ತು. ಈಗ ಸಿಂಹಗಳ ಮುಖಭಾವವು ಬಹಳ ಆಕ್ರಮಣ ಶೈಲಿಯಲ್ಲಿ ಲಾಂಛನವಿದೆ. ಇದು ಭಾರತದ ಶೈಲಿ ಅಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243