ದಿನದ ಸುದ್ದಿ

ಕೋವಿಡ್-19 | ಲ್ಯಾಬ್ ವರದಿ ಒಯ್ಯುತ್ತೀರಾ? ಕರ್ನಾಟಕಕ್ಕೆ ಬರುವ ನಿಮಗೆ ಸಾಂಸ್ಥಿಕ ಸಂಪರ್ಕತಡೆಯಿಂದ ವಿನಾಯಿತಿ

Published

on

ಸುದ್ದಿದಿನ ಡೆಸ್ಕ್ : ಕೋವಿಡ್ ನೆಗೆಟಿವ್ ಎಂದು ಪ್ರಮಾಣೀಕರಿಸುವ ಇತ್ತೀಚಿನ ಲ್ಯಾಬ್ ವರದಿಗಳೊಂದಿಗೆ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ರಾಜ್ಯ ಸರ್ಕಾರವು ಸಾಂಸ್ಥಿಕ ಸಂಪರ್ಕತಡೆಯಲ್ಲಿ (institutional quarantine) ಸೋಮವಾರ ವಿನಾಯಿತಿ ನೀಡಿದೆ.

ಐಸಿಎಂಆರ್-ಅನುಮೋದಿತ ಲ್ಯಾಬ್‌ನಿಂದ ಪ್ರಮಾಣೀಕರಿಸಿದ ವರದಿಯಲ್ಲಿ ‘ಕೋವಿಡ್ ನೆಗೆಟಿವ್’ ಎಂದು ಬಂದಿರುವ  ವರದಿಯನ್ನು ಪ್ರಯಾಣಿಕರು ತೋರಿಸಿದರೆ, ಅವರು ನೇರವಾಗಿ ಅವರ ಮನೆಗೆ ಹೋಗಬಹುದು, ಆದರೆ ಎರಡು ವಾರಗಳವರೆಗೆ ಮನೆ-ಸಂಪರ್ಕತಡೆಯಲ್ಲಿರ ಬೇಕು(Homequarantine) ಆದರೆ , ಅವರು ಕೊಡುವ ವರದಿಯು ಎರಡು ದಿನಗಳಿಗಿಂತ ಹಳೆಯದಾಗಿರಬಾರದು.

ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು ಮತ್ತು ಆರೋಗ್ಯ ಕಾರ್ಯಕರ್ತರು ತಮ್ಮ ಸಾಂಸ್ಥಿಕ ವಾಸ್ತವ್ಯದ ಸ್ಥಳಗಳಲ್ಲಿ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಲು ಅಂತರ್-ರಾಜ್ಯ ಚೆಕ್‌ಪೋಸ್ಟ್‌ಗಳಂತಹ ಸೌಲಭ್ಯಗಳಲ್ಲಿ ಕಾಯಬೇಕಾದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಈ ವರದಿಯು ಕೊಂಚ ರಿಲೀಫ್ ನೀಡಲಿದೆ. ಕರ್ನಾಟಕಕ್ಕೆ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಬರುತ್ತಿರುವ
ಪ್ರಯಾಣಿಕರಿಗೆ ಇದು ಸಹಾಯಕವಾಗಿದೆ.

ಕೇಂದ್ರ ಮತ್ತು ರಾಜ್ಯ ಸಚಿವರು, ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ವಿಮಾನಯಾನ ಸಿಬ್ಬಂದಿ ಸದಸ್ಯರನ್ನು ಸಂಪರ್ಕತಡೆಯಿಂದ ಸರ್ಕಾರ ವಿನಾಯಿತಿ ನೀಡಿದೆ.

ಮುಂಚಿನ ನಿಯಮಗಳಿಗೆ ಆರು ಹೆಚ್ಚಿನ ಅಪಾಯದ ರಾಜ್ಯಗಳ ಪ್ರಯಾಣಿಕರು ಮೊದಲ ವಾರವನ್ನು ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು ಎರಡನೇ ವಾರವನ್ನು ಮನೆ ಸಂಪರ್ಕತಡೆಯನ್ನು ಕಳೆಯಬೇಕಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version