ದಿನದ ಸುದ್ದಿ

ಅಂತರ್ಜಾತಿ ವಿವಾಹ : ಪರಸ್ಪರ ತಾಳಿ ಕಟ್ಟಿಕೊಂಡ ವಧು-ವರರು..!

Published

on

ಸುದ್ದಿದಿನ, ವಿಜಯಪುರ: ವಿಜಯಪುರ ‌ನಗರದ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ‌ ಬಸವ ತತ್ವದಡಿಯಲ್ಲಿ‌ ವಿಶೇಷ ಮದುವೆಯೊಂದು ನಡೆದಿದೆ. ಅಂತರ್ಜಾತಿ ವಿವಾಹದ ಜೊತೆಗೆ ಪರಸ್ಪರ ವಧು-ವರರು ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ.

ಕಳೆದ ಮಾರ್ಚ್ 10 ರಂದು ನಾಲತವಾಡದ ಹಳ್ಳೂರ್ ಪ್ಯಾಲೇಸ್‌ನಲ್ಲಿ ಬಸವ ತತ್ವದ ವಿವಾಹ ನಡೆಯಿತು. ಈ ವೇಳೆ ವಧು-ವರರಾದ ಉದ್ಯಮಿ ಪ್ರಭುರಾಜ್-ಅಂಕಿತಾ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಅಮಿತ್- ಪ್ರಿಯಾ ಪರಸ್ಪರ ಮಾಂಗಲ್ಯ ಧಾರಣೆ ಮಾಡಿಕೊಂಡಿದ್ದಾರೆ.

ಇನ್ನು ಈ ವಿವಾಹಕ್ಕೆ ಮಹೂರ್ತ‌ ನಿಗದಿ ಮಾಡಿರಲಿಲ್ಲ. ಅಲ್ಲದೆ ಅಕ್ಷತೆ ಹಾಕದೇ ಪುಷ್ಷವೃಷ್ಟಿ ಮಾಡಲಾಗಿದೆ. ಸಮಾನತೆಯ ಸಂಕೇತವಾಗಿ ವಧು ವರರು ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಈ ವಿಶೇಷ ವಿವಾಹಕ್ಕೆ ವಿವಿಧ ಮಠಾಧೀಶರು ಸಾಕ್ಷಿಯಾದ್ರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version