ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಚಾತಕ ಪಕ್ಷಿ

Published

on

ಚಾತಕ ಪಕ್ಷಿ (Jacobian Cuckoo (Female))
  • ಭಗವತಿ ಎಂ. ಆರ್ | ಛಾಯಾಗ್ರಾಹಕಿ, ಕವಯಿತ್ರಿ

ಳೆಗಾಲದ ಆಗಮನವನ್ನು ಹೊತ್ತು ತರುವ, ಕಾಳಿದಾಸನು “ಮೇಘದೂತ” ಕಾವ್ಯದಲ್ಲಿ ವರ್ಣಿಸಿದ ಅಷ್ಟೇನು ಪರಿಚಿತವಲ್ಲದ ಪಕ್ಷಿ-ಚಾತಕ. ಈ ಹಕ್ಕಿಗಳಿಗೆ- “ಗಲಾಟೆ ಕೋಗಿಲೆ”, “ಚೊಟ್ಟಿ ಕೋಗಿಲೆ” ಎಂಬ ಹೆಸರೂ ಇದೆ.

ಇವುಗಳ ತಲೆಯ ಮೇಲೆ ಜುಟ್ಟು ಇರುವುದರಿಂದ ಮತ್ತು  ಸಾಮಾನ್ಯವಾಗಿ ಇವು ದಟ್ಟ ಮರಗಳಿರುವ ಕಡೆ ಒಂದನ್ನೊಂದು ಅಟ್ಟಾಡಿಸುತ್ತಾ ಗದ್ದಲ ಎಬ್ಬಿಸುವುದರಿಂದ “ಚೊಟ್ಟಿ ಕೋಗಿಲೆ”, “ಗಲಾಟೆ ಕೋಗಿಲೆ” ಎನ್ನುವ ಹೆಸರು ಬಂದಿರುವಂತೆ ಕಾಣುತ್ತದೆ.

ಈ ಪಕ್ಷಿಗಳು ಮೇ ತಿಂಗಳ ಕೊನೆಯ ಭಾಗದಲ್ಲಿ, ಜೂನ್ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಪುರಾಣಗಳಲ್ಲಿ ಉಲ್ಲೇಖವಿರುವ ಅನೇಕ ಪಕ್ಷಿಗಳು ಈಗಲೂ ಜೀವಂತವಾಗಿವೆ. ಅಂತಹ ಪ್ರಾಚೀನ ಪಕ್ಷಿಗಳಲ್ಲಿ ಚಾತಕವೂ ಒಂದು.

ಚಾತಕವು ಮಳೆಯ ಹನಿಗಳು ಭೂಮಿಗೆ ಬೀಳುವ ಮೊದಲೇ ಕುಡಿಯುತ್ತವೆಂಬ ನಂಬಿಕೆ ಇದೆ. ಈ ವಲಸೆ ಪಕ್ಷಿ ಚಾತಕವು ಮಳೆಯ ನೀರಿಗಾಗಿ ಕಾತರಿಸಿದೆಯೇನೋ ಎಂಬಂತೆ ತೋರುತ್ತದೆ. ತಲೆಯ ಮೇಲಿನ ಜುಟ್ಟನ್ನು ಅತ್ತಿತ್ತ ಅಲ್ಲಾಡಿಸುತ್ತ ಮಳೆಯ ನೀರಿಗಾಗಿ ಕಾತರಿಸಿ ಮರದ ಕೊಂಬೆಯ ಮೇಲೆ ಕೂತಿರುವಂತೆ ತೋರುತ್ತದೆ.

ಕೋಗಿಲೆಯ ಜಾತಿಗೆ ಸೇರಿದ ಎಲ್ಲಾ  ಪಕ್ಷಿಗಳಂತೆ ಚಾತಕವೂ ಪರತಂತ್ರ ಜೀವಿ. ಇವು ಬೇರೆ ಬೇರೆ ಹಕ್ಕಿಗಳ ಗೂಡಿನಲ್ಲಿ ಸುಮಾರು ಇಪ್ಪತ್ತೈದು ಮೊಟ್ಟೆಗಳನ್ನು ಇಡುತ್ತವಂತೆ. ಸಾಮಾನ್ಯವಾಗಿ ಹರಟೆ ಮಲ್ಲ (Jungle Babbler, Common Babblers) ಮತ್ತು ಪಿಕಳಾರ ಹಕ್ಕಿಗಳ (Red-vented Bulbul) ಮೊಟ್ಟೆಗಳು, ಜಾತಕ ಹಕ್ಕಿಗಳ ಮೊಟ್ಟೆಗಳನ್ನು ಹೋಲುವುದರಿಂದ, ಅವುಗಳ ಗೂಡಿನಲ್ಲಿ ಮೊಟ್ಟೆಯಿಡುತ್ತವೆ.

ಗಂಡು ಹಕ್ಕಿಯು ಉದ್ದೇಶಿತ ಗೂಡಿನ ಬಳಿ ಹೋಗಿ, ಅಲ್ಲಿರುವ ಹಕ್ಕಿಯ ಗಮನ ಬೇರೆಡೆಗೆ ಸೆಳೆದಾಗ, ಹೆಣ್ಣು ಹಕ್ಕಿಯು ಮೊಟ್ಟೆಯಿಟ್ಟು ಬರುತ್ತದಂತೆ. ಈ ಅವಸರದ ಕಾರ್ಯದಲ್ಲಿ ಒಂದೆರಡು ಮೊಟ್ಟೆಗಳು ಒಡೆದು ಹೋಗುವುದು ಸಾಮಾನ್ಯ. ಈ ವಿಷಯದಲ್ಲಿ ಈ ಪಕ್ಷಿಗೆ “ಗಲಾಟೆ ಕೋಗಿಲೆ” ಎನ್ನುವ ಹೆಸರು ಅನ್ವರ್ಥಕವಾಗಿಯೇ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243  

Trending

Exit mobile version