ದಿನದ ಸುದ್ದಿ

ದಾವಣಗೆರೆ | ಜಲಸಿರಿ ಯೋಜನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಕೆಯುಐಡಿಎಫ್‍ಸಿ-ಕೆಐಯುಡಬ್ಲ್ಯುಎಂಐಪಿ-ಪಿಐಯು, ಹರಿಹರದ ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ ಒಳ ಚರಂಡಿ ಪೈಪ್‍ಲೈನ್, ಮ್ಯಾನ್‍ಹೋಲ್ ಹಾಗೂ ಸಂಸ್ಕರಣಾ ಘಟಕಗಳ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು ಅನುಷ್ಟಾನದ ಹಂತದಲ್ಲಿ ಮ್ಯಾನ್‍ಹೋಲ್‍ಗಳಿಂದ ಪ್ರತಿ ಮನೆಗಳಿಗೆ ಪೈಪ್ ಜೋಡಣೆ ಮಾಡಿದ್ದು ಇರುತ್ತದೆ. ಒಳಚರಂಡಿ ವ್ಯವಸ್ಥೆಯನ್ನು ಮನೆಗಳಿಗೆ ಸಂಪರ್ಕ ಕಲ್ಪಿಸಲು ಯೋಜನೆಯನ್ನು ಸಿದ್ದಪಡಿಸಲಾಗಿದೆ.

ಈ ಯೋಜನೆಯ ಉದ್ದೇಶವು ಹರಿಹರ ನಗರದ ಜನತೆಗೆ ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವ ಅವಕಾಶ ಕಲ್ಪಿಸುವುದಾಗಿರುತ್ತದೆ. ಆದರೆ ಹಲವು ಸಾರ್ವಜನಿಕರು ತಮ್ಮ ಮನೆಯಿಂದ (ಅಡುಗೆ ಮನೆ, ಸ್ನಾನ, ಗೃಹ ಹಾಗೂ ಶೌಚಾಲಯಗಳು) ಕೊಳಚೆ ನೀರನ್ನು ಒಳಚರಂಡಿ ಕೊಳವೆ ಮಾರ್ಗಕ್ಕೆ ಸಂಪರ್ಕ ನೀಡಿರುವುದು ತಿಳಿದು ಬಂದಿರುತ್ತದೆ.

ಇನ್ನೂ ಒಳಚರಂಡಿ ಕಾಮಗಾರಿ ಅಂತಿಮ ಹಂತದಲ್ಲಿರುವುದರಿಂದ ಅನಧಿಕೃತವಾಗಿ ಸಂಪರ್ಕ ಮಾಡಿಕೊಂಡಿರುವುದು ಅಪರಾಧವೆಂದು ತಿಳಿಸುತ್ತಾ, ಒಂದು ವೇಳೆ ಅನಧಿಕೃತವಾಗಿ ಸಂಪರ್ಕ ಪಡೆದಿದ್ದಲ್ಲಿ ಸ್ವ ಇಚ್ಚೆಯಿಂದ ಕಡಿತಗೊಳಿಸುವುದು. ತಪ್ಪಿದಲ್ಲಿ ಪೌರಾಡಳಿತ ಕಾಯ್ದೆ ಅಧಿನಿಯಮ 202/203 ರ ಆದೇಶದಂತೆ ರೂ. 2000 ಗಳ ದಂಡವನ್ನು ವಿಧಿಸಲಾಗುವುದು.

ಆದ್ದರಿಂದ ಮೇಲ್ಕಂಡ ಇಲಾಖೆಯಿಂದಲೇ ಕೈಗೊಂಡಿರುವ ಮನೆಯ ಸಂಪರ್ಕದ ಜೋಡಣೆಗೆ ಸಹಕಾರ ನೀಡಬೇಕಿದೆ. ಯಾವುದೇ ಯೋಜನೆಯು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯವಶ್ಯಕ. ನಗರವನ್ನು ಮಾಲಿನ್ಯರಹಿತ ಸಮಾಜವನ್ನಾಗಿ ಪರಿವರ್ತಿಸುವ ನಗರಸಭೆ ಪ್ರಯತ್ನಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಹರಿಹರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version