ರಾಜಕೀಯ

ಮಂಡ್ಯ | ಯಡಿಯೂರಪ್ಪ ಹಗಲುಗನಸು ಕಾಣ್ತಿದ್ದಾರೆ, ನಾವು 9ಲಕ್ಷ ಮತಗಳ ಅಂತರದಲ್ಲಿ ಗೆಲ್ತೇವೆ : ಜಮೀರ್ ಅಹಮದ್

Published

on

ಸುದ್ದಿದಿನ,ಮಂಡ್ಯ : ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಜೊತೆ ಪ್ರಚಾರಕ್ಕೆ ಆಗಮಿಸಿದ್ದೀವಿ. ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ನಾವು ಭಾಗವಹಿಸುತ್ತಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಿಗೆ ಪ್ರಚಾರ ಮಾಡುವುದಿಲ್ಲ ಎಂಬ ಬಗೆಗೆ ಮಾಧ್ಯಮಗಳಲ್ಲಿ ಸುದ್ದಿ ಹರಡಿತ್ತು. ಅದೇಲ್ಲ ಬರೀ ಮಾದ್ಯಮಗಳ ಊಹಾಪೋಹಾ ಅಷ್ಟೇ ಎಂದು ಮಂಡ್ಯದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ 1 ಲಕ್ಷ ಮತ ಪಡೆದುಕೊಳ್ಳ ಬಹುದು.ಜೆಡಿಎಸ್ ಕಾಂಗ್ರೆಸ್ ಮತಗಳು 10 ಲಕ್ಷಕ್ಕೂ ಹೆಚ್ಚಿವೆ. ಹೀಗಾಗಿ ನಾವು 9 ಲಕ್ಷಗಳ ಅಂತರದಲ್ಲಿ ಗೆಲ್ಲುತ್ತೇವೆ. ನಮ್ಮ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವು ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಪಕ್ಷವನ್ನ ತಾಯಿಯ ಹಾಗೆ ನೋಡ್ತಾರೆ ಹಾಗಾಗಿ ಯಾವುದೇ ಮುನಿಸಿಲ್ಲ ಎಂದು ಅಭಿಪ್ರಾಯ ಪಟ್ಟರು.

ಯಡಿಯೂರಪ್ಪ ಹಗಲುಗನಸು ಕಾಣ್ತಿದ್ದಾರೆ

ಎಲ್ಲರೂ ರಾತ್ರಿ ಕನಸು ಕಂಡರೆ ಯಡಿಯೂರಪ್ಪ ಸರ್ಕಾರ ಈಗ ಬೀಳುತ್ತೆ ಆಗ ಬೀಳುತ್ತೆ ಎಂದು ಹಗಲು ಕನಸು ಕಾಣ್ತಿದ್ದಾರೆ. ಶಿವರಾಮೇಗೌಡರ ಪ್ರಚಾರಕ್ಕೆ ರಮ್ಯಾ, ಅಂಬರೀಶ್ ಬರ್ತಾರೆ.ರಮೇಶ್ ಜಾರಕಿ ಹೋಳಿ ಅವರು ಡಿ ಕೆ ಶಿವಕುಮಾರ್ ಅವರ ಕುರಿತು ಹೇಳಿಕೆ ನೀಡಿಲ್ಲ.ಶೋ ಅಪ್ ಮಾಡ್ಬೇಡಿ ಅಂತ ಎಲ್ರೂನು ಕುರಿತು ಹೇಳಿದ್ದಾರೆ ಡಿ‌ ಕೆ ಶಿವಕುಮಾರ್ ಅವರ ಕುರಿತು ಹೇಳಿದ್ದಾರೆ ಅನ್ನೊದು ಮಾಧ್ಯಮದ ಸೃಷ್ಟಿ. ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ನಾವು ಬಿಡುವುದಿಲ್ಲ. ಒಂದು ವೇಳೆ ಅವರು ನಿವೃತ್ತಿಯಾದರೂ ನಾವು ಮನೆಯಿಂದ ಎತ್ತಾಕೊಂಡು ಬರ್ತಿವಿ. ಕಾರ್ಯಕರ್ತರಲ್ಲಿ ಗೊಂದಲ ಅಸಮಾಧಾನ ಇರುವುದು ನಿಜಾ.ಇದು ಉಪ ಚುನಾವಣೆ ಇರೋದ್ರಿಂದ ಒಪ್ಪಂದವಾಗಿದೆ ಹಾಗಾಗಿ ಕ್ಷೇತ್ರ ಬಿಟ್ಟು ಕೊಡಲಾಗಿದೆ. ಮುಂದಿನ‌‌ ಚುನಾವಣೆಗೆ ಏನಾಗುತ್ತೊ ಗೊತ್ತಿಲ್ಲ ಎಂದರು.

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ತಾರೆ.
ಕಾಂಗ್ರೆಸ್ ನಲ್ಲಿದ್ದು ಬಿಜೆಪಿಗೆ ಹೋದ ಮಾತ್ರಕ್ಕೆ ಜನ‌ ಬಿಜೆಪಿಗೆ ಮತ ಹಾಕ್ತಾರಾ..? ಜೆಡಿಎಸ್ ರೆಬಲ್ ಶಾಸಕರಾದ ನಾವು 7 ಜನರಿಗೆ ರಾಜಕೀಯವಾಗಿ ಯಾವುದೇ ರೀತಿಯ ತೊಂದರೆಯಾದರೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ನಾನು ಚುನಾವಣೆ ಟೈಂ ಲಿ‌ ಕುಮಾರಸ್ವಾಮಿ ಅವರನ್ನ ಕುರಿತು ಕೆಟ್ಟದಾಗಿ ಮಾತನಾಡಿದ್ದು ನಿಜಾ. ಆದ್ರೆ ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿ ತಾವು ಜಾತ್ಯಾತೀತರು ಅನ್ನೋದು ಸಾಬೀತು ಪಡಿಸಿದ್ದಾರೆ ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version