ದಿನದ ಸುದ್ದಿ
ಜನತಾ ಕರ್ಫ್ಯೂ ಮತ್ತು ಪೌರ ಕಾರ್ಮಿಕರು
ದಾವಣಗೆರೆ, ಸುದ್ದಿದಿನ : ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ, ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ದಾವಣಗೆರೆ ನಗರ ಬಹುತೇಕ ಸ್ತಬ್ಧವಾಗಿದೆ. ಆದರೆ ಪೌರಕಾರ್ಮಿಕರು ಮಾತ್ರ ಬೀದಿಗಿಳಿದು ತಮ್ಮ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ.
ಯಾವುದೇ ಹಬ್ಬ,ಜಾತ್ರೆ, ರಜೆ, ಪ್ರತಿಭಟನೆಯ ಸಂಧರ್ಭದಲ್ಲಿಯೂ ಕೂಡ ಇವರು ತಮ್ಮ ಕಾಯಕ ನಿರ್ವಹಿಸುವ ಅನಿವಾರ್ಯತೆಯಿದೆ. ಇಲ್ಲದಿದ್ದರೆ, ನಗರದ ಸ್ವಚ್ಚತೆ ಮತ್ತು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕಡಿಮೆ ವೇತನ ಮತ್ತು ಸೇವಾ ಅಭದ್ರತೆಯ ನಡುವೆಯೂ ಕೂಡ ತಮ್ಮ ಕಾಯಕ ನಿರ್ವಹಿಸುತ್ತಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಇವರಿಗೆ, ಸರ್ಕಾರಗಳು ಸೇವಾ ಭದ್ರತೆ ಮತ್ತು ಅದಕ್ಕೆ ತಕ್ಕನಾದ ವೇತನ ಕೊಡುವಲ್ಲಿ ನಿರ್ಲಕ್ಷವಹಿಸಿರುವುದು ದುರಂತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243