/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಹಬ್ಬಕ್ಕೆ ‘ಹಂಪಿ ದಿಬ್ಬಣ’ ದ ಒಡವೆಗಳ ಮೋಡಿ..!

Published

on

ಹೇಳಿ ಕೇಳಿ ಸಾಲು ಸಾಲು ಹಬ್ಬಗಳ ಸಂಭ್ರಮ ಸಡಗರ ಮನೆಮಾಡಿದೆ. ಗೌರಿ ಗಣೇಶ, ದಸರಾ, ದೀಪಾವಳಿ.. ಹಬ್ಬ ಅಂದ ಮೇಲೆ ಹೆಂಗಳೆಯರ ಚಿನ್ನಾಭರಣಗಳ ಮೋಹದ ಬಗ್ಗೆ ಎರಡನೇ ಮಾತಿಲ್ಲ. ಹಬ್ಬಕ್ಕೆ ಹೊಸ ಸ್ಟೈಲ್ ಒಡವೆ ಕೊಳ್ಳುವವರು 2019ರ ಟಾಪ್ ಜಿವಲೆರೀ ಟ್ರೆಂಡ್ ಗಳ ಪಟ್ಟಿ ಇಲ್ಲಿದೆ ನೋಡಿ.

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಚಿನ್ನದಾಭರಣಗಳು ಕೇವಲ ಪ್ರತಿಷ್ಠೆಯ ಸೋಗಾಗಿರದೆ ಸಾಂಪ್ರದಾಯಿಕ ವಾಡಿಕೆಯೂ ಆಗಿದೆ. ಹಿಂದಿನ ಕಾಲದಿಂದಲೂ ಆಭರಣಗಳಲ್ಲಿ ಸನಾತನ ಹಿಂದೂ ಧರ್ಮದ ಆಚರಣೆ, ದೇವಾನುದೇವತೆಗಳನ್ನು ರಚಿಸಲಾಗುತ್ತಿದೆ.

ಇದೇ ಸಂಪ್ರದಾಯ ಮುಂದುವರೆದು, ಇಂದಿಗೂ ಅಕ್ಕಸಾಲಿಗನ ಕೈಗಳಲ್ಲಿ ಅಂದದ ಆಭರಣಗಳು ಮೂಡಿ ಬರುತ್ತಿದೆ. ಆಧುನಿಕ ಯುಗದಲ್ಲಿ”ಟೆಂಪಲ್  ಜಿವಲೆರೀ ” ಟ್ರೆಂಡ್ ಆಗಿದೆ. ಆಭರಣಗಳಲ್ಲಿ ದೇವಾನುದೇವತೆಗಳ ಚಿತ್ತಾರ ಅಂದವಾಗಿ ಅರಳಿದೆ. ಕಾಲೇಜು ಕ್ಯಾಂಪಸ್ ಗಳ ಎಥಿನಿಕ್ ಡೇ.. ಕಾಲೇಜು ವಾರ್ಷಿಕೋತ್ಸವ, ಮನೆಯ ಮದುವೆ, ಮುಂಜೀ ಕಾರ್ಯಕ್ರಮ ಗಳಲ್ಲಿ ಲಲನೆಯರ ಶೃಂಗಾಕೆ ಟೆಂಪಲ್ ಜಿವಲೆರೀ ಸಾಥ್ ನೀಡಿದೆ.

ಕರ್ನಾಟಕ ರಾಜ್ಯದ ಗತವೈಭವ ಸಾರಿ ಹೇಳುವ ಹಂಪಿ ಸಾಮ್ರಾಜ್ಯದ ಹಲವು ತುಣುಕುಗಳು ಚಿನ್ನಾಭರಣ ದೋಚಿದ ಮೇಲೆ ಚಿತ್ರಿತವಾಗಿದೆ.ಹೊಯ್ಸಳರ ಸಂಸ್ಕೃತಿ ಸಾರುವ ಆಭರಣಗಳು ಮಾರುಕಟ್ಟೆಗೆ ನೂತನ ಎಂಟ್ರಿ ಪಡೆದಿದೆ.ಹಂಪಿಯ ಕಲ್ಲಿನ ರಥ, ಗಂಡಭೇರುಂಡ ಪಕ್ಷಿ ಯ ಆಭರಣಗಳು, ಉಗ್ರನರಸಿಂಹ ಸ್ವಾಮಿ ಯು ಚಿತ್ತಾರದ ಪದಕ ಹಾರಿ, ಕವಿಯ ಒಲೆಯಲ್ಲಿ ಸರಿಗಮಪ ಸಾರುವ ಕಂಬದ ಚಿತ್ತಾರ. ಹೀಗೆ ಹಾಳು ಹಂಪಿಯನ್ನು ಚಿನ್ನಾಭರಣಗಳುಲ್ಲಿರುವ
ಜೀವಂತವಾಗಿಸಲಾಗಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version