ಲೈಫ್ ಸ್ಟೈಲ್
‘ನವರಾತ್ರಿ’ಯ ಉತ್ಸವಕ್ಕೆ ಟ್ರೆಂಡ್ ಆಯ್ತು ಆಕ್ಸಿಡೈಸ್ಡ್ ಜಿವಲೆರೀ..!
ಒಂಭತ್ತು ದಿನಗಳ ನವರಾತ್ರಿ ಆಚರಣೆ ಜೋರಾಗಿಯೇ ಸಾಗಿದೆ. ಎಲ್ಲೆಲ್ಲೂ ತಾಯಿ ಚಾಮುಂಡೇಶ್ವರಿಯ ಆರಾಧನೆ , ಪೂಜೆ ಆಚರಣೆಗಳ ಬೆನ್ನಲ್ಲೇ ಫ್ಯಾಷನ್ ದುನಿಯಾದಲ್ಲಿ ಕೂಡ ನವರಾತ್ರಿ ಯ ಮೆರಗು ಕಳೆಕಟ್ಟಿದೆ. ನವರಾತ್ರಿ ಯ ಡಾಂಡಿಯಾ ಮತ್ತು ಗರ್ಭಾ ಆಚರಣೆಗೆ ಮಹಿಳಾ ಲೋಕ ಸಜ್ಜುಗೊಂಡಿದ್ದು ಆಕ್ಸಿಡೈಸ್ಡ್ ( ಕಪ್ಪು ಲೋಹದ) ಆಭರಣಗಳ ಟ್ರೆಂಡ್ ಮರುಕಳಿಸಿದೆ.
ದೊಡ್ಡ ಗಾತ್ರದ ಝುಮುಕಿ, ಬಳೆ,ಮೇಲು ಕುತ್ತಿಗೆ ಸರ-ಹಾರ ಗಳ ಅಬ್ಬರ ಆಭರಣ ಲೋಕದಲ್ಲಿ ಸದ್ಯ ಸಕ್ಕತ್ ವೈರಲ್. ನವರಾತ್ರಿ ಯ ಸಾಂಪ್ರದಾಯಿಕ ಉಡುಪುಗಳೊಂದಿಗೆ ಈ ಕಪ್ಪು ಲೋಹದ ಒಡವೆಗಳು ಸಕ್ಕತ್ ಆಗಿ ಮ್ಯಾಚ್ ಆಗುತ್ತದೆ. ಹೊಚ್ಚ ಹೊಸಾ ವಿನ್ಯಾಸದ ಕಪ್ಪು ಲೋಹದ ಆಭರಣಗಳ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ. ಹಾಗಾದ್ರೆ ಈ ಬಾರಿಯ ದಸರಾ ಡಾಂಡಿಯಾ ಡ್ರೆಸ್ ನೊಂದಿಗೆ ಕಪ್ಪು ಲೋಹದ ಆಭರಣಗಳ ಧರಿಸುವುದು ಮರೆಯದಿರಿ.
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು
ಸುದ್ದಿದಿನ.ಕಾಂ|ವಾಟ್ಸಾಪ್|9986715401