ಸಿನಿ ಸುದ್ದಿ

ಜೊತೆ ಜೊತೆಯಲಿ ಅನು ‘ಕ್ಯೂಟ್ ಸ್ಮೈಲ್’ಗೆ ಫಿದಾ ಆದ್ರು ನೆಟ್ಟಿಗರು ; ಮಿಸ್ ಮಾಡ್ದೆ ನೀವೂ ನೋಡಿ ಈ ವಿಡಿಯೋ..!

Published

on

ಸುದ್ದಿದಿನ ಡೆಸ್ಕ್ : 90ರ ದಶಕದಲ್ಲಿ ಬಂದ ಧಾರವಾಹಿಗಳು ಇತಿಹಾಸ ಸೃಷ್ಟಿಸಿದ್ದವು.ಮಾಯಾಮೃಗ, ಸರೋಜಿನಿ, ಸಾಧನೆ, ಮನೆತನ, ಮನ್ವಂತರ, ಮುಕ್ತ ಮುಕ್ತ ಹಾಗೂ ಇನ್ನಿತರೆ ಧಾರಾವಾಹಿಗಳು ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದ್ದವು. ಅವು ಜನಮಾನಸದಲ್ಲಿ ಅಚ್ಚಳಿಯದೆ ಉಳಿದವೂ ಕೂಡ.

ನಂತರ ಈ ಯಶಸ್ಸಿನ ದಾರಿಯಲ್ಲಿ ನುಗ್ಗಿದ ಹಲವು ಧಾರಾವಾಹಿಗಳು ವಿಷಯ ವಸ್ತು, ನಿರೂಪಣೆ, ದೃಶ್ಯಗಳನ್ನು ವೈಭವೀಕರಿಸುವುದರಲ್ಲಿ ಯಾವಾಗ ತೊಡಗಿದವೋ ಪ್ರೇಕ್ಷಕರು ಧಾರಾವಾಹಿಗಳೆಂದರೆ ಮೂಗುಮುರಿಯುವಂತಹ ಮನಸ್ಥಿತಿಯನ್ನು ತಂದೊಡ್ಡಿದ್ದವು.

2019 ರಲ್ಲಿ ಝೀಕನ್ನಡ ವಾಹಿನಿಯಲ್ಲಿ ಆರಂಭವಾದ ‘ಜೊತೆ ಜೊತೆಯಲಿ’ ಧಾರಾವಾಹಿ ಪುನಃ ಪ್ರೇಕ್ಷಕರನ್ನು ಟಿವಿಯ ಮುಂದೆ ಕುಳ್ಳಿರಿಸುವಂತೆ ಮಾಡಿತು. ನಟ ಅನಿರುಧ್, ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ‌ ಈ ಧಾರಾವಾಹಿ 45 ವರ್ಷದ ಒಬ್ಬ ಪ್ರಖ್ಯಾತ ಉದ್ಯಮಿ ಹಾಗೂ ಮಧ್ಯಮ ಕುಟುಂಬ ವರ್ಗದ 20 ವರ್ಷದ ಹುಡುಗಿಯೊಂದಿಗಿನ ನವಿರಾದ ಪ್ರೇಮಕಥಾ ಹಂದರವುಳ್ಳದ್ದಾಗಿದೆ.

ಇವರಿಬ್ಬರ ಪ್ರೇಮ, ಆಗಾಗ ಬರುವ ತೊಡಕುಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಂಪೂರ್ಣ ಯಶಸ್ವಿಯಾಗಿ ಮುನ್ನುಗ್ಗಿತು. ಧಾರಾವಾಹಿ ಎಂದರೆ ಮೂಗು ಮುರಿಯಿತ್ತಿದ್ದವರೆಲ್ಲ ಮತ್ತೆ ಈ ಧಾರಾವಾಹಿ ನೋಡಲು ಸಮಯ ಮೀಸಲಿಟ್ಟರು. ಇದು ಈ ಧಾರಾವಾಗಿಯ ಮೈಲುಗಲ್ಲು ಎನ್ನಬಹುದು.

ಅಂದಹಾಗೆ ಈ ಧಾರಾವಾಹಿಯಲ್ಲಿ ನಟಿಸಿರುವ ಅನು ಅಲಿಯಾಸ್ ಮೇಘ ಶೆಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮುದ್ದಾಗಿ ಕಿರುನಗೆ ಬೀರಿರುವ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅನು ಅವರ ಕ್ಯೂಟ್ ಸ್ಮೈಲ್’ ಗೆ ಫಿದಾ ಆಗಿದ್ದು, ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಅನು ಕ್ಯೂಟ್ ಸ್ಮೈಲ್ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version