ದಿನದ ಸುದ್ದಿ
ಶಂಕಿತ ಗೌರಿ ಹಂತಕನ ಹಿನ್ನೆಲೆ ಏನು ಗೊತ್ತಾ ?
ಸುದ್ದಿದಿನ,ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಬಂಧಿತವಾಗಿರುವ 26 ವರ್ಷದ ಪರಶುರಾಮ್ ವಾಗ್ಮೋರೆ ಆರು ವರ್ಷದ ಹಿಂದೆ ರಾಯಚೂರಿನ ತಹಸೀಲ್ದಾರ್ ಕಚೇರಿ ಎದುರು ಪಾಕ್ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಆರೋಪಿ ಆಗಿದ್ದ ಎನ್ನಲಾಗಿದೆ.
ಸಿಂಧಗಿ ಮೂಲದ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ವಿಚಾರಣೆಗೆ 14 ದಿನಗಳ ಕಾಲ ವಿಚಾರಣೆ ಕೋರ್ಟ್ ಆದೇಶ ನೀಡಿದೆ.
ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದ್ದು ಪರಶುರಾಮ್ ಎಂದು ಶಂಕೆ ವ್ಯಕ್ತಪಡಿಸಿದದ್ದು, ಆತನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಈತ ಶ್ರೀರಾಮುಸೇನೆಯ ಕಾರ್ಯಕರ್ತನಾಗಿದ್ದ ಎಂದು ಕೆಲ ಖಾಸಗಿ ವಾಹಿನಿಗಳು ವರದಿ ಪ್ರಕಟಿಸಿವೆ.