ದಿನದ ಸುದ್ದಿ
ಕರ್ನಾಟಕ ರಾಜ್ಯದಲ್ಲಿ ಸರ್ಕಾರನೇ ಇಲ್ಲ : ಈಶ್ವರಪ್ಪ ವ್ಯಂಗ್ಯ
ಸುದ್ದಿದಿನ, ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಸರ್ಕಾರನೇ ಇಲ್ಲ. ಕಾಂಗ್ರೆಸ್ ನವರು ಕುಮಾರಸ್ವಾಮಿಯನ್ನ ಮುಖ್ಯ ಮಂತ್ರಿ ಅಂತಾ ಒಪ್ಕೊಂಡಿಲ್ಲ.ವಿಪ್ ಕೊಟ್ಟಿದ್ರೂ ಅದನ್ನ ಕಸದ ಬುಟ್ಟಿಗೆ ಹಾಕಿದ್ದಾರೆ.ಏನಾದ್ರೂ ಮಾಡ್ಕೋಳಿ ಅಂತಾ ಅವರೇ ಕೇರ್ ಮಾಡ್ಕೊಂಡಿಲ್ಲ. ಕ್ರಮ ಕೈಗೊಳ್ತೀವಿ ಅಂದ್ರೂ ಏನು ಕ್ರಮ ತಗೊಂಡೇ ಇಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ನ ಶಾಸಕರು ಗೈರಾಗಿದ್ದಾರೆ.
ಸರ್ಕಾರವನ್ನ ಅವರ ಶಾಸಕರೇ ಒಪ್ಕೊಳ್ತಿಲ್ಲ.ದಿನೇಶ್ ಗುಂಡೂರಾವ್ ಹೇಳ್ತಿದ್ರೂ ಎಲ್ಲಾ ಶಾಸಕರು ಬರ್ತಾರೆ ಅಂತಾ, ಆದರೆ ನಿನ್ನೆ ಯಾಕ್ ಬಂದಿಲ್ಲ ಅಂತಾ ಇವತ್ತು ಉತ್ತರ ನೀಡಲಿ. ನಿಮ್ಮ ಶಾಸಕರೇ ನಿಮ್ಮ ಕಂಟ್ರೋಲ್‌ನಲ್ಲಿ ಇಲ್ಲ.
ಆಪರೇಷನ್ ಕಮಲ ಮಾಡ್ತಿದ್ದಾರೆ ಅಂತಾ ನಮ್ಮ ಮೇಲೆ ಯಾಕ್ ಆರೋಪ ಮಾಡ್ತೀರಾ?ಕೈಲಾಗದವನು ಮೈ ಪರಚಿಕೊಳ್ತಾರೆ ಅನ್ನೋ ರೀತಿ ಹೇಳ್ತಿದ್ದಾರೆ.ತಮ್ಮ ಶಾಸಕರನ್ನ ತಮ್ಮ ಕೈಯಲ್ಲಿ ಇಟ್ಕೋಳೋಕೆ ತಾಖತ್ ಇಲ್ಲದೇ ಬಿಜೆಪಿ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401