ದಿನದ ಸುದ್ದಿ
“ಓಂ” ಸಿನಿಮಾ 25 ವರ್ಷಗಳ ಒಂದು ಹಿನ್ನೋಟ
- ವೆಂಕಟೇಶ್ ನಾರಾಯಣಸ್ವಾಮಿ
ಸೆನ್ಸಾರ್ ಅಧಿಕಾರಿಯೊಬ್ಬರಿಗೆ ರೌಡಿಗಳು ಕರೆ ಮಾಡಿ ಧಮ್ಕಿ ಹಾಕಿದ್ದಾರೆ! ಸಿನಿಮಾ ನಾಳೆ ಬಿಡುಗಡೆ ಆಗುತ್ತದೆಯೇ..?! ಎಂದು ಬಿಡುಗಡೆಯ ಹಿಂದಿನ ದಿನದ ಸಂಜೆ ದಿನ ಪತ್ರಿಕೆಗಳು ಮಾಡಿದ ಬಿಸಿ ಸುದ್ದಿ ಪ್ರಚಾರ ಕಡೇ ಗಳಿಗೆಯಲ್ಲೂ ಭಾರೀ ಸಂಚಲನನ್ನುಂಟು ಮಾಡಿತ್ತು..!
ಅಲ್ಲಿಯವರೆಗೂ.. ಸಿನಿಮಾ ತಯಾರಿಕೆಯಲ್ಲಿ ಡಾ.ರಾಜ್ ಸಂಸ್ಥೆ ಅನುಸರಿಸುತ್ತಿದ್ದ ಕಥೆ, ಚಿತ್ರಕಥೆ, ಪಾತ್ರಗಳು, ಪಾತ್ರಪೋಷಣೆಯಲ್ಲಿರುತ್ತಿದ್ದ ಶಿಸ್ತು ಬದ್ದ ಕ್ರಮವನ್ನು ಧಾಟಿ, ಅವುಗಳಿಗೆ ತದ್ವಿರುದ್ಧವಾದ ಕಥೆ, ಪಾತ್ರಪೋಷಣೆ, ಸಂಭಾಷಣೆ, ಭೀಭತ್ಸಕರವಾದ ದೃಶ್ಯಗಳು.. ಮುಂತಾದವುಗಳನ್ನೆಲ್ಲಾ ಶ್ರೀ.ವರದಣ್ಣ, ಶ್ರೀ ಮತಿ ಪಾರ್ವತಮ್ಮ ನಂತಹ ಘಟಾನುಘಟಿಗಳೆಲ್ಲಾ ಒಪ್ಪಿದ್ದು ಆ ಕಾಲಕ್ಕೆ ಕಥಾಲೇಖಕ ಉಪೇಂದ್ರರವರ ಅದೃಷ್ಟವೆಂದೇ ಹೇಳಬೇಕು.
ಇನ್ನೂ ಹೇಳುವುದಾದರೆ,
ಸಮಾಜದಲ್ಲಿ ಡಾ.ರಾಜ್ ರವರಿಗಿರುವ ಅಭಿಮಾನ ಗೌರವಗಳನ್ನು ಈ ಚಿತ್ರ ನಿರ್ದೇಶನ ಮಾಡುವುದರ ಮೂಲಕ ತಾನೂ ವೃತ್ತಿಯಲ್ಲಿ ಅತೀ ದೊಡ್ಡ ಯಶಸ್ಸು ಹೊಂದಲು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಸೂಕ್ತವಾಗಿ ಫ್ಲಾನ್ ಮಾಡಿ ವರ್ಕೌಟ್ ಮಾಡಿಕೊಂಡ ಬುದ್ದಿವಂತ ನಿರ್ದೇಶಕ ಉಪೇಂದ್ರ.
ಅಂದು,
ಕ್ಯಾಮೆರಾ ಮತ್ತು ಸಂಕಲನ ವಿಷಯಗಳಲ್ಲಿ ಉಪೇಂದ್ರರವರ ಕ್ರಿಯಾಶೀಲತೆಗೊಂದು ಉದಾಹರಣೆ ಈ ಹಾಡು.
ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243