ದಿನದ ಸುದ್ದಿ

ದಾವಣಗೆರೆ | ನ. 17 ರಂದು ದೊಡ್ಡಬಾತಿ ಗುಡ್ಡದ ಮೇಲೆ ‘ಕನ್ನಡ ರಾಜ್ಯೋತ್ಸವ’

Published

on

ಸುದ್ದಿದಿನ,ದಾವಣಗೆರೆ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿ ದೊಡ್ಡಬಾತಿ, ಚುಟುಕು ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಘಟಕ, ದಾವಣಗೆರೆ ಸಿರಿಗನ್ನಡ ವೇದಿಕೆ, ಸ್ಫೂರ್ತಿ ಪ್ರಕಾಶನ ತೆಲಿಗಿ – ದಾವಣಗೆರೆ ಹಾಗೂ ಭಾವಸಿರಿ ಪ್ರಕಾಶನ ಅಣಬೇರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ : 17/11/2019 ರ ಭಾನುವಾರ ಬೆಳಗ್ಗೆ 10.30ಕ್ಕೆ ದೊಡ್ಡಬಾತಿ ಗ್ರಾಮದ ಗುಡ್ಡದ ಮೇಲಿನ ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ 64 ನೇ ಕರ್ನಾಟಕ ರಾಜ್ಯೋತ್ಸವ, ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10.30 ಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ. ಬಾತಿ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಚುಸಾಪ ಅಧ್ಯಕ್ಷರಾದ ರಾಜಶೇಖರ್ ಗುಂಡಗಟ್ಟಿ ಉದ್ಘಾಟಿಸುವರು. ಸಮಿತಿಯ ಅಧ್ಯಕ್ಷರಾದ ಹೆಚ್ ರೇವಣಸಿದ್ದಪ್ಪ ಪ್ರಾಸ್ತಾವಿಕ ನುಡಿಯಾಡುವರು. ಕನ್ನಡ ನಾಡು ನುಡಿ ಕುರಿತು ಕನ್ನಡ ಪ್ರಾಧ್ಯಾಪಕರಾದ ಬಸವರಾಜ ಹನುಮಲಿ ಮಾತನಾಡುವರು. ಸಾಹಿತಿಗಳಾದ ಓಂಕಾರಯ್ಯ ತವನಿಧಿ, ಚ. ಷ. ಮಲ್ಲಿಕಾರ್ಜುನಪ್ಪ ಹಾಗೂ ಎಂ. ಎಸ್ ಮಲ್ಲಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಈ ವೇಳೆ ಸಾಧಕರುಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್ ಟಿ ಗಂಗಾಧರ, ಸಮಾಜ ಸೇವಕರುಗಳಾದ ಬಸಪ್ಪ ಕೋಂ ಹನಗವಾಡಿ ಕರಿಬಸಪ್ಪ , ಕೆ. ಎಂ ಚನ್ನಬಸವಯ್ಯ ಹಾಗೂ ಕವಿ ಜೆ. ವಸುಪಾಲಪ್ಪ ಅವರಿಗೆ ಸನ್ಮಾನಿಸಲಾಗುವುದು. 2018 ರಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಮಮತ ಕೆ.ಎಂ, ಅಶ್ವಿನಿ ಡಿ. ಎಂ, ಕಾವ್ಯ ಎಸ್, ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಂಗೀತ ದೊಗ್ಗಳ್ಳಿ ಹಾಗೂ ಶ್ರೀರಾಮ ದೊಡ್ಡಬಾತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಮಧ್ಯಾಹ್ನ 2 ಗಂಟೆಗೆ ಸಿರಿಗನ್ನಡ ವೇದಿಕೆಯ ದಾವಣಗೆರೆ ಜಿಲ್ಲಾಧ್ಯಕ್ಷರಾದ ಶಿವಯೋಗಿ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಸಾಹಿತಿ ಗಂಗಾಧರ ಬಿ ಎಲ್ ನಿಟ್ಟೂರ್ ಆಶಯ ನುಡಿಯಾಡುವರು. ಮುಖ್ಯ ಅತಿಥಿಗಳಾಗಿ ಕವಿಗಳಾದ ಎಂ. ಬಸವರಾಜ, ಪಿ. ವಿ. ರವಿಕುಮಾರ್, ಶೋಭ ಮಂಜುನಾಥ, ತಾರೇಶ್ ಅಣಬೇರು, ಹರಪನಹಳ್ಳಿ ತಾಲ್ಲೂಕು ಕರವೇ ಅಧ್ಯಕ್ಷ ನಾಗರಾಜ್ ತೆಲಿಗಿ ಭಾಗವಹಿಸುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version