ದಿನದ ಸುದ್ದಿ

ಕನ್ನಡ ವಿವಿ ಬೆಳ್ಳಿಹಬ್ಬ | ‘ಮಹಿಳಾ ವಿರೋಧಿ ಪತ್ರಕರ್ತ ವಿಶ್ವೇಶ್ವರ ಭಟ್’ ಅವರನ್ನು ಕಾರ್ಯಕ್ರಮದಿಂದ ಕೈ ಬಿಡುವಂತೆ ಪ್ರತಿಭಟನೆ

Published

on

ಸುದ್ದಿದಿನ ಡೆಸ್ಕ್ : ಮಹಿಳಾ ವಿರೋಧಿ ನೀತಿ ಹೊಂದಿರುವ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿ ಯ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದ ಪುಸ್ತಕ ಬಿಡುಗಡೆ ಕಾರ್ಯಕ್ರಮದಿಂದ ಕೈ ಬಿಡುವಂತೆ ‘ಬಯಲು ಚಿಂತನ ಸಂಶೋಧನಾ ವಿದ್ಯಾರ್ಥಿ ಬಳಗ’ ವು ಇಂದು (ಸೋಮವಾರ) ಪ್ರತಿಭಟನೆ ನಡಡಸಿತು.

ಅಲಕ್ಷಿತ ಸಮುದಾಯದ, ಪಾರಂಪರಿಕವಾಗಿ ಅಲಕ್ಷತೆಗೆ ಒಳಗಾದ ಮಹಿಳಾ ಸಮುದಾಯದ ಬಗೆಗೆ ವಿಶೇಷವಾಗಿ ಕಾಳಜಿ ಪೂರ್ಣ ಸಂಶೋಧನೆ ಮತ್ತು ಕಾರ್ಯಗಳನ್ನು ಮಾಡಿಕೊಂಡು ಬಂದಂತಹ ಕನ್ನಡ ವಿಶ್ವವಿದ್ಯಾಲಯವು ಸಂವಿಧಾನ ಬದ್ಧವಾದ ಆಲೋಚನೆಗಳನ್ನು ಮುನ್ನೆಲೆಗೆ ತರುತ್ತಿದೆ. ಆದರೆ 2019 ರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸ್ತ್ರೀ ಸಮುದಾಯದ ಬಗೆಗೆ ಹೊಂದಿರುವ ವಿರೋಧಿ ಮತ್ತು ಕೀಳುಮಟ್ಟದ ಚಿಂತನೆಗಳನ್ನು ಹೊಂದಿರು ವಿಶ್ಚೇಶ್ವರ ಭಟ್ಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂವೇದನಾಶೀಲ ಮನಸ್ಸುಗಳಿಗೆ ಆಘಾತ ಉಂಟು ಮಾಡಿದೆ ಎಂದು ಹೇಳಿದೆ.

ಮನವಿ ಪತ್ರ

ಒಂದು ವೇಳೆ ವಿಶ್ವವಿದ್ಯಾಲಯವು ವಿಶ್ವೇಶ್ವರ ಭಟ್ಟರನ್ನು ಕಾರ್ಯಕ್ರಮದಿಂದ ಕೈ ಬಿಡದಿದ್ದರೆ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿಕ್ರಯೆ ಬೇರೆಯ ರೀತಿಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version