ದಿನದ ಸುದ್ದಿ

ಕೇವಲ ಐವರು ಅಭ್ಯರ್ಥಿಗಳಷ್ಟೇ ಸ್ಪರ್ಧೆಯಲ್ಲಿ..!

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನಸಭೆಗೆ ಮುಂದಿನ ತಿಂಗಳ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ 2 ಸಾವಿರದ 613 ಅಭ್ಯರ್ಥಿಗಳಿದ್ದಾರೆ.

ಬಿಜೆಪಿಯಿಂದ 224ಅಭ್ಯರ್ಥಿಗಳು, ಕಾಂಗ್ರೆಸ್ – 223 , ಜೆಡಿಎಸ್-207, ಎಎಪಿ-209, ಬಿಎಸ್‌ಪಿ-133, ಸಿಪಿಐಎಂ-4, ಜೆಡಿಯು-8, ಎನ್‌ಪಿಪಿ ಯಿಂದ ಇಬ್ಬರು, ನೋಂದಾಯಿತ ರಾಜಕೀಯ ಪಕ್ಷಗಳ – 685ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ- 918 ಅಭ್ಯರ್ಥಿಗಳು ಸೇರಿದಂತೆ ಅಂತಿಮ ಕಣದಲ್ಲಿ 2 ಸಾವಿರದ 613 ಅಭ್ಯರ್ಥಿಗಳಿದ್ದಾರೆ.

ಇವರ ಪೈಕಿ 2 ಸಾವಿರದ 427 ಪುರುಷ, 184 ಮಹಿಳೆಯರು ಹಾಗೂ ಇತರೆ ಇಬ್ಬರು ಅಭ್ಯರ್ಥಿಗಳಿದ್ದಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 24 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.

ಯಮಕನ ಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಭಂಟ್ವಾಳ ಮತಕ್ಷೇತ್ರಗಳಲ್ಲಿ ಅತಿ ಕಡಿಮೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version