ರಾಜಕೀಯ
ಕಾಂಗ್ರೆಸ್ ನಲ್ಲಿ ಹೆಚ್ಚಿದ ಸಂಪುಟ ಸಂಕಟ : ಶಾಸಕರಾಯ್ತು, ಈಗ ಸಚಿವರ ಸರದಿ !
ಸುದ್ದಿದಿನ ಡೆಸ್ಕ್ : ಹಲವು ಸಚಿವರ ನಿಗೂಢ ಚಟುವಟಿಕೆಗಳು ಗುಪ್ತಚರ ಇಲಾಖೆಯಿಂದ ಸರಕಾರಕ್ಕೆ ಮಾಹಿತಿ ದೊರೆತಿದೆ. ಸಂಪುಟದಿಂದ ಕೈ ಬಿಡುವವರ ಪಟ್ಟಿಯಲ್ಲಿರುವ ಸಚಿವರಿಂದ ನಿಗೂಢ ನಡೆ ಉಂಟಾಗಿದ್ದು, ಬಿಜೆಪಿ ಜೊತೆ ಸಂಪರ್ಕ ಸಾಧಿಸಿದ್ದಾರೆ ಹಲವು ಸಚಿವರು.
ನಿನ್ನೆ ರಾತ್ರಿ ಬಿ ಎಸ್ ಯಡಿಯೂರಪ್ಪ ಜೊತೆ ಚರ್ಚಿಸಿದ ಸಚಿವರು ಸಂಪುಟ ಪುನರ್ ರಚನೆಯಲ್ಲಿ ಕೈ ಬಿಡುವ ಬಗ್ಗೆ ಬಿ ಎಸ್ ವೈ ಜೊತೆ ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೋಳಿ, ಜಯಮಾಲ, ಆರ್ ವಿ ದೇಶಪಾಂಡೆ, ಆರ್ ಶಂಕರ್ ರಿಂದ ನಿನ್ನೆ ರಾತ್ರಿ ಬಿ ಎಸ್ ವೈ ಭೇಟಿಯಾಗಿದ್ದು, ಖಾಸಗಿ ಹೊಟೇಲ್ ನಲ್ಲಿ ನಡೆದ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರು ಎನ್ನಲಾಗಿದೆ.ಸಚಿವರ ನಿಗೂಢ ನಡೆಯಿಂದ ಮತ್ತಷ್ಟೂ ಆತಂಕದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ.ಶಾಸಕರಾಯ್ತು, ಈಗ ಸಚಿವರ ಬಂಡಾಯ ಶುರುವಾಗಿದ್ದು ಸಂಪುಟದಿಂದ ತೆಗೆದರೆ ಬೆಂಬಲಿತ ಶಾಸಕರ ಜೊತೆ ಬಿಜೆಪಿ ಸೇರುವ ಸಂದೇಶ ರವಾನೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401